ADVERTISEMENT

ವಿದ್ಯಾರ್ಥಿನಿ ನೆರವಿಗೆ ಮುಂದಾದ ಶಿಕ್ಷಣ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 16:35 IST
Last Updated 23 ಜುಲೈ 2021, 16:35 IST

ಚಿತ್ರದುರ್ಗ: ತಂದೆಯ ಆತ್ಮಹತ್ಯೆಯ ಅಘಾತದ ನಡುವೆಯೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಯಾದಗಿರಿ ಜಿಲ್ಲೆಯ ನಾಗನೂರು ಗ್ರಾಮದ ವಿದ್ಯಾರ್ಥಿನಿ ಬಿಂದು ದೇಶಪಾಂಡೆ ಅವರನ್ನು ಶೈಕ್ಷಣಿಕವಾಗಿ ದತ್ತು ಪಡೆಯಲು ಇಲ್ಲಿನ ಎಸ್ಆರ್‌ಎಸ್‌ ಶಿಕ್ಷಣ ಸಂಸ್ಥೆ ಮುಂದೆಬಂದಿದೆ.

ಪಿಯು ಹಂತದ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಶಿಕ್ಷಣ ಸಂಸ್ಥೆ ಆಶ್ವಾಸನೆ ನೀಡಿದೆ. ಹಾಸ್ಟೆಲ್‌ ಹಾಗೂ ಕಾಲೇಜು ಪ್ರವೇಶವನ್ನು ಉಚಿತವಾಗಿ ನೀಡಲು ತೀರ್ಮಾನಿಸಿದೆ.

‘ಸಾಲದ ಹೊರೆ ತಾಳಲಾರದೇ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರೂ ವಿದ್ಯಾರ್ಥಿನಿ ಶಿಕ್ಷಣ ಮುಂದುವರಿಸುವುದು ಕಷ್ಟವಾಗಬಹುದು. ಈ ವಿದ್ಯಾರ್ಥಿನಿಗೆ ಎಸ್‌ಆರ್‌ಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಉಚಿತ ಪ್ರವೇಶ ಕಲ್ಪಿಸಲಾಗುವುದು. ಮುಂದಿನ ಎರಡು ವರ್ಷದ ಶಿಕ್ಷಣದ ಜವಾಬ್ದಾರಿಯನ್ನು ಹೊರಲಾಗುವುದು’ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

‘ತಂದೆಯ ಆತ್ಮಹತ್ಯೆಯ ಅಘಾತದ ನಡುವೆಯೂ ಪರೀಕ್ಷೆ ಬರೆದ ವಿದ್ಯಾರ್ಥಿನಿ’ ಎಂಬ ವರದಿಯನ್ನು ‘ಪ್ರಜಾವಾಣಿ’ ಶುಕ್ರವಾರ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.