ಹೊಳಲ್ಕೆರೆ: ತಾಲ್ಲೂಕಿನ ಲೋಕದೊಳಲು ಗೇಟ್ ಸಮೀಪ ಬೊಲೆರೊ ಗೂಡ್ಸ್ ವಾಹನ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಹೊಸಹಟ್ಟಿ ಗ್ರಾಮದ ಸಿ.ಧರಣೇಶಪ್ಪ (63) ಹಾಗೂ ಪೂಜಾರಿ ರಂಗಪ್ಪ (39) ಮೃತಪಟ್ಟವರು. ವಾಹನದಲ್ಲಿದ್ದ ಹೊಸಹಟ್ಟಿ ಗ್ರಾಮದ ಪ್ರದೀಪ್ ಕುಮಾರ್, ಕೃಷ್ಣಕಾಂತ್ ಹಾಗೂ ಸೊಂಡೆಕೊಳ ಗ್ರಾಮದ ಬಸವರಾಜ್, ಚಾಲಕ ರುದ್ರೇಶ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ರಾತ್ರಿ ಹೊಸಹಟ್ಟಿ ಗ್ರಾಮದಿಂದ ಚಿತ್ರದುರ್ಗ ಸಮೀಪದ ಸಿಂಗಪುರಕ್ಕೆ ದೇವರ ಕಾರ್ಯಕ್ಕೆ ಹೋಗಿದ್ದ ಇವರು ಸ್ವಗ್ರಾಮಕ್ಕೆ ವಾಪಾಸ್ ಬರುವಾಗ ಈ ಘಟನೆ ಸಂಭವಿಸಿದೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.