ADVERTISEMENT

ಕಣಿವೆ ಮಾರಮ್ಮದೇವಿ ಜಾತ್ರಾ ಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:35 IST
Last Updated 12 ಮೇ 2022, 4:35 IST
ಧರ್ಮಪುರದ ಗ್ರಾಮದೇವತೆ ಕಣಿವೆ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಕೇತಿಕ ಸಿಡಿ ಉತ್ಸವ ನಡೆಯಿತು
ಧರ್ಮಪುರದ ಗ್ರಾಮದೇವತೆ ಕಣಿವೆ ಮಾರಮ್ಮದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಸಾಂಕೇತಿಕ ಸಿಡಿ ಉತ್ಸವ ನಡೆಯಿತು   

ಧರ್ಮಪುರ: ಇಲ್ಲಿನ ಕಣಿವೆ ಮಾರಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಬುಧವಾರ ಸಿಡಿ ಮರೋತ್ಸವ ವೈಭವದಿಂದ ನೆರವೇರಿತು.

ಬುಧವಾರ ಕೈವಾಡಸ್ಥರ ಮೊದಲ ಸಿಡಿ ಸಾವಿರಾರು ಭಕ್ತರ ಹರ್ಷೋದ್ಗಾರದ ಮಧ್ಯೆ ನೆರವೇರಿತು.

ಬೆಳಿಗ್ಗೆಯಿಂದಲೇ ಸಿಡಿ ಮರ ಏರುವವರು ಮೈಯಿಗೆ ಗಂಧ ಲೇಪನ ಹಾಕಿಸಿಕೊಂಡು ಗ್ರಾಮದಲ್ಲಿ ವಿವಿಧ ವಾದ್ಯಗಳೊಂದಿಗೆ ಕುಣಿಯುತ್ತಾ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಂಡರು. ಸಂಜೆ 5ಕ್ಕೆ ಮೊದಲು ದೇವರಪಲ್ಲಕ್ಕಿಯನ್ನು ಸಿಡಿ ಮರಕ್ಕೆ ಕಟ್ಟಿ ಪೂಜೆ ಸಲ್ಲಿಸಿ ಮರ ಏರಿಸಿದರು.

ADVERTISEMENT

ಆನಂತರ ಧರ್ಮಪುರದ ಆದಿ ಕರ್ನಾಟಕ ಮನೆತನದವರು ಮೊದಲ ಸಿಡಿ ನಡೆಸಿದರು. ಧರ್ಮಪುರದ ಅಭಿ ಎನ್ನುವ ಯುವಕ ಸಿಡಿ ಮರ ಏರುವ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರ ಹಿಡಿದಾಗ ಜಾತ್ರೆಗೆ ಬಂದಿದ್ದ ಸಾವಿರಾರು ಜನರು ಹರ್ಷೋದ್ಗಾರ, ಚಪ್ಪಾಳೆ, ಸಿಳ್ಳೆ ಹಾಕಿ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.