ADVERTISEMENT

‘ನಗ್ನ ಚಿತ್ರ’ ಕಳುಹಿಸಿದ್ದ ವಿಕೃತ ಸಂಯೋಜಕ!

‘ಫೇಸ್‌ ಬುಕ್‌’ನಲ್ಲಿ ಪರಿಚಯ: ಲೈಂಗಿಕ ಕಿರುಕುಳ ಆರೋಪ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2019, 19:55 IST
Last Updated 28 ಆಗಸ್ಟ್ 2019, 19:55 IST
   

ಬೆಂಗಳೂರು: ‘ಫೇಸ್‌ಬುಕ್‌’ ಮೂಲಕ ಪರಿಚಯವಾದ ಮಹಿಳೆಗೆ, ಧಾರವಾಹಿ ಮತ್ತು ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಮಾಡಿಕೊಡುವುದಾಗಿ ನಂಬಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸಂಗೀತ ಸಂಯೋಜ ಕನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಕೆ.ಎಸ್. ಲೇಔಟ್ ನಿವಾಸಿ ಮುರಳೀಧರ್ (42) ಬಂಧಿತ ಆರೋಪಿ. ಕೆಂಗೇರಿ ನಿವಾಸಿಯಾದ 34 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬುಧವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಕೆಲವು ಸಿನಿಮಾಗಳು ಮತ್ತು ಆಲ್ಬಂ ಹಾಡುಗಳಿಗೆ ಮುರಳೀಧರ ಸಂಗೀತ ನೀಡುತ್ತಿದ್ದಾನೆ. ಹಲವು ಸಂಗೀತ ನಿರ್ದೇಶಕರ ಜತೆಯಲ್ಲಿಯೂ ಕೆಲಸ ಮಾಡಿದ್ದಾನೆ. ಕುಮಾರಸ್ವಾಮಿ ಲೇಔಟ್‍ನಲ್ಲಿರುವ ಮನೆಯಲ್ಲಿ ತನ್ನದೇ ಮ್ಯೂಸಿಕ್ ಸ್ಟುಡಿಯೋ ತೆರೆದಿದ್ದ ಎಂದು ಅವರು ಹೇಳಿದರು.

ADVERTISEMENT

‘ದೂರುದಾರ ಮಹಿಳೆಗೆ 2017ರಲ್ಲಿ ಫೇಸ್‍ಬುಕ್‍ನಲ್ಲಿ ಮುರಳೀಧರ್ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿದ್ದ. ಅದಕ್ಕೆ ಆಕೆ ಒಪ್ಪಿಗೆ ಕೊಟ್ಟಿದ್ದರು. ಜೂನ್ 19ರಂದು ಮೆಸೆಂಜರ್‌ನಲ್ಲಿ ಸಂತ್ರಸ್ತೆಯನ್ನು ಸಂಪರ್ಕಿಸಿ ಜಾಹೀರಾತು ಹಾಗೂ ಧಾರವಾಹಿಗಳಲ್ಲಿ ನಟಿಸಲು ಇಷ್ಟವಿದೆಯೇ ಎಂದು ಪ್ರಶ್ನಿಸಿದ್ದ. ಅದಕ್ಕೂ ಒಪ್ಪಿದಾಗ ತನ್ನ ಮೊಬೈಲ್‌ ನಂಬರ್‍ ಸಂತ್ರಸ್ತೆಗೆ ಕಳುಹಿಸಿದ್ದ. ಬಳಿಕ ಮಹಿಳೆಯ ಜೊತೆ ವಾಟ್ಸ್‌ಆ್ಯಪ್ ಚಾಟಿಂಗ್ ಮಾಡಿದ್ದಾನೆ. ಇತ್ತೀಚೆಗೆ ವಾಟ್ಸ್‌ಆ್ಯಪ್‌ ಸ್ಟೇಟಸ್‍ಗೆ ತನ್ನ ನಗ್ನ ಫೋಟೋಗಳನ್ನು ಹಾಕಿ, ಲೈಕ್ ಮಾಡುವಂತೆ ಹಿಂದೆ ಬಿದ್ದಿದ್ದ. ಅದರಿಂದ ನೊಂದು ಆಕೆ ದೂರು ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.