ADVERTISEMENT

ಎಸ್‌ಐ ಶ್ರೀಕಲಾ ವಜಾಕ್ಕೆ ಆಗ್ರಹಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2017, 7:24 IST
Last Updated 18 ಏಪ್ರಿಲ್ 2017, 7:24 IST
ಪಿಎಸ್‌ಐ ಶ್ರೀಕಲಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. 	ಪ್ರಜಾವಾಣಿ ಚಿತ್ರ
ಪಿಎಸ್‌ಐ ಶ್ರೀಕಲಾ ಅವರನ್ನು ವಜಾಗೊಳಿಸುವಂತೆ ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ಕೊಣಾಜೆ ಠಾಣೆಯ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ಶ್ರೀಕಲಾ ಅವರ ವಿರುದ್ಧ ದಾಖಲಾಗಿರುವ ಪ್ರಕರ ಣಗಳ ಕುರಿತು ಸಮಗ್ರವಾದ ಮರು ತನಿಖೆ ನಡೆಸುವಂತೆ ಆಗ್ರಹಿಸಿ ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.ಸಬ್‌ ಇನ್‌ಸ್ಪೆಕ್ಟರ್‌ ಶ್ರೀಕಲಾ ಅವರು ಸಾಮಾನ್ಯ ಜನರ ಮೇಲೆ ದುಂಡಾವ ರ್ತನೆ ಪ್ರವೃತ್ತಿ ನಡೆಸುತ್ತಿದ್ದಾರೆ. ಇಲಾಖೆ ಅಧಿಕಾರ ದುರುಪಯೋಗ ಮಾಡಿ ಕೊಂಡು ಅಕ್ರಮ ಹಣ ಸಂಪಾದನೆ ದಂಧೆಯಲ್ಲಿ ತೊಡಗಿದ್ದಾರೆ.

ವಿನ್‌ ಗೋಲ್ಡ್‌, ಎನಿಪೇ, ವಿಜಾರ್‌ ಕಂಪೆನಿ ಗಳಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವ ಆಸೆ ಹುಟ್ಟಿಸಿ ಅಮಾಯಕರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದು, ಅಕ್ರಮ ಅವ್ಯವಹಾರ ನಡೆಸುವ ಮೂಲಕ ಜನರಿಗೆ ವಂಚನೆಮಾಡಿದ್ದಾರೆ. ಅವರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು ಎಂದು ಧರಣಿನಿರತ ಕಾರ್ಯಕರ್ತರು ಒತ್ತಾಯ ಮಾಡಿದರು.

ಕಂಪೆನಿಗಳಲ್ಲಿ ಹಣ ಹೂಡಿಕೆ ಮಾಡಿ ರುವ ಜನರು ಹಣ ವಾಪಸ್‌ ಕೇಳಿದರೆ ಕೇಸು ಹಾಕುವ ಬೆದರಿಕೆ ಹಾಕುತ್ತಿದ್ದು, ಈ ಪ್ರಕರಣದಲ್ಲಿ ಅವರ ಪತಿ ಸಂಜಯ್‌ ಕೂಡಾ ಭಾಗಿಯಾಗಿದ್ದಾರೆ. ಇವರು ಒಂದು ತಂಡವನ್ನೇ ರಚನೆ ಮಾಡಿಕೊಂ ಡಿದ್ದಾರೆ. ಅದರ ಮೂಲಕ ಇಂತಹ ಹಣ ವಸೂಲಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಮುಡುಪಿನಲ್ಲಿ ತರಕಾರಿ ವ್ಯಾಪಾರ ಮಾಡುವ ರುಕ್ಮಯ್ಯ ಅವರ ಮೇಲೆ ಸುಳ್ಳು ಗಾಂಜಾ ಪ್ರಕರಣ ದಾಖಲು ಮಾಡಿ ಠಾಣೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಲಾಗಿದೆ. ಅಕ್ರಮ ಮರಳು ಸಾಗಣೆಗೆ ಕುಮ್ಮಕ್ಕು ನೀಡುತ್ತಿದ್ದು, ಹಫ್ತಾ ವಸೂಲಿ ದಂಧೆಯಲ್ಲಿ ತೊಡಗಿಕೊಂಡಿ ದ್ದಾರೆ. ಕೂಡಲೇ ಇಂತಕ ಕೃತ್ಯಗಳಲ್ಲಿ ಭಾಗಿ ಆಗಿರುವ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

‘ತರಕಾರಿ ವ್ಯಾಪಾರಿ ರುಕ್ಮಯ್ಯ ಅವರ ಮೇಲಿನ ಪ್ರಕರಣ ವಾಪಸ್‌ ಪಡೆಯ ಬೇಕು. ಹಣ ದಂಧೆಯಲ್ಲಿ ತೊಡಗಿ ಕೊಂಡಿರುವ ಶ್ರೀಕಲಾ ಅವರನ್ನು ಸೇವೆ ಯಿಂದಲೇ ವಜಾ ಮಾಡಬೇಕು’ ಎಂದು ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕ ರಘುವೀರ್‌ ಸೂಟರ್‌ಪೇಟೆ ಅವರು ನಗರ ಪೊಲೀಸ್‌ ಆಯುಕ್ತರನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.