ADVERTISEMENT

ಕುಮಟಾ: ನ.19ಕ್ಕೆ ಮೀನುಗಾರರ ಸಮಾವೇಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 8:56 IST
Last Updated 20 ಅಕ್ಟೋಬರ್ 2017, 8:56 IST

ಮಂಗಳೂರು: ಮೀನುಗಾರರ ಸಂಘಟನೆಗಾಗಿ ಅಖಿಲ ಭಾರತ ಮೀನುಗಾರರ ಕಾಂಗ್ರೆಸ್‌ ಅನ್ನು ರಚಿಸಲಾಗಿದ್ದು, ನವೆಂಬರ್‌ 19ರಂದು ಕುಮಟಾದಲ್ಲಿ ಮೀನುಗಾರರ ಸಮಾವೇಶವನ್ನು ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಮೀನುಗಾರರ ಕಾಂಗ್ರೆಸ್‌ ಅಧ್ಯಕ್ಷ ಯು.ಆರ್‌. ಸಭಾಪತಿ ಹೇಳಿದರು.

ನಗರದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಸಮಾವೇಶವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಉದ್ಘಾಟಿಸಲಿದ್ದು, ಸುಮಾರು 60 ಸಾವಿರ ಜನರು ಸೇರುವ ನಿರೀಕ್ಷೆ ಇದೆ’ ಎಂದರು.

ಈಗಾಗಲೇ ಕರ್ನಾಟಕದಲ್ಲಿ ಕೆಪಿಸಿಸಿ ಮೀನುಗಾರರ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರು, ಪದಾಧಿ ಕಾರಿಗಳನ್ನು ನೇಮಕ ಮಾಡಲಾಗಿದೆ. ಸಮಾವೇಶದ ಮೂಲಕ ಮೀನುಗಾರರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಇದು ಕೇವಲ ಜಾತಿಗೆ ಸೀಮಿತವಾದ ಸಂಘಟನೆಯಲ್ಲ. ಬದಲಾಗಿ ಮೀನು ಗಾರಿಕೆಯಲ್ಲಿ ತೊಡಗಿರುವವರ ಸಂಘ ಟನೆ. ರಾಜ್ಯದಲ್ಲಿ ಸುಮಾರು 23 ಲಕ್ಷ ಮೀನುಗಾರರು ಇದ್ದು, ಕೇವಲ ಮೂವರು ಮಾತ್ರ ಶಾಸಕರಾಗಿದ್ದಾರೆ. ಒಬ್ಬ ಸಂಸದರೂ ಇಲ್ಲ. ಹೀಗಾಗಿ ಬರುವ ವಿಧಾನ ಸಭೆ ಚುನಾವಣೆಯಲ್ಲಿ ಕನಿಷ್ಠ 10 ಮೀನುಗಾರರಿಗೆ ಟಿಕೆಟ್‌ ನೀಡಬೇಕು. ರಾಜ್ಯದ ಒಂದು ಲೋಕಸಭಾ ಕ್ಷೇತ್ರದಲ್ಲಿ ಮೀನುಗಾರರಿಗೆ ಅವಕಾಶ ನೀಡುವಂತೆ ಸಮಾವೇಶದಲ್ಲಿ ಆಗ್ರಹಿಸಲಾಗುವುದು ಎಂದರು.

ರಾಜ್ಯಗಳಲ್ಲಿ ಮೀನುಗಾರಿಕೆಗೆ ಪ್ರತ್ಯೇಕ ಸಚಿವರು ಇದ್ದಾರೆ. ಆದರೆ, ಕೇಂದ್ರ ಸರ್ಕಾರದಲ್ಲಿ ಕೃಷಿ ಸಚಿವರೇ, ಮೀನುಗಾರಿಕೆಯನ್ನು ನೋಡಿಕೊಳ್ಳುತ್ತಿದ್ದಾರೆ. ಇದರಿಂದ ಮೀನುಗಾರರ ಸಮಸ್ಯೆಗಳ ಬಗ್ಗೆ ಹೆಚ್ಚಿನ ಗಮನ ಹರಿಸಲು ಆಗುತ್ತಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರದಲ್ಲಿ ಪ್ರತ್ಯೇಕ ಮೀನುಗಾರಿಕೆ ಸಚಿವಾ ಲಯ ಆರಂಭಿಸುವಂತೆಯೂ ಒತ್ತಾಯಿಸ ಲಾಗುವುದು ಎಂದು ತಿಳಿಸಿದರು.

ಕೆಲ ರಾಜ್ಯಗಳಲ್ಲಿ ಮೀನುಗಾರರನ್ನು ಪರಿಶಿಷ್ಟ ವರ್ಗಕ್ಕೆ ಸೇರ್ಪಡೆ ಮಾಡ ಲಾಗಿದೆ. ಕರ್ನಾಟಕದಲ್ಲಿ ಸುಮಾರು 39 ವಿವಿಧ ಜಾತಿಗಳನ್ನು ಒಳಗೊಂಡ ಮೀನುಗಾರರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಅದು ತಿರಸ್ಕೃತವಾಗಿದ್ದು, ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

19ರಂದು ಕುಮಟಾ ಸಮಾವೇಶದ ನಂತರ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ನಡೆ ಯಲಿದ್ದು, ರಾಹುಲ್‌ ಗಾಂಧಿ ಪಾಲ್ಗೊಳ್ಳ ಲಿದ್ದಾರೆ. ಮೀನುಗಾರರ ಘಟಕದ ಸಂಘಟನೆಗಾಗಿ ಈಗಾಗಲೇ ಜಿಲ್ಲಾ ಪ್ರವಾಸ ಆರಂಭಿಸಲಾಗಿದ್ದು, ಆಯಾ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಘಟಕಗಳ ಅಧ್ಯಕ್ಷರು, ಬ್ಲಾಕ್‌ ಅಧ್ಯಕ್ಷರ ಅಭಿಪ್ರಾಯ ಪಡೆದು, ಮೀನುಗಾರರ ಘಟಕದ ಜಿಲ್ಲಾ ಅಧ್ಯಕ್ಷರನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

10 ಜಿಲ್ಲೆಗಳಿಗೆ ಈಗಾಗಲೇ ನೇಮಕ ಮಾಡಲಾಗಿದೆ. ದೀಪಕ್‌ ಶ್ರೀಯಾನ್‌ ಬೋಳೂರು (ದಕ್ಷಿಣ ಕನ್ನಡ), ಮನೋಜ್‌ ಎಸ್‌. ಕರ್ಕೇರಾ (ಉಡುಪಿ), ಮಂಜುನಾಥ ಬೋವಿ (ಹಾವೇರಿ), ಮಂಜುನಾಥ ಬಾಲಪ್ಪ ಭೀಮಕ್ಕನವರ (ಧಾರವಾಡ ಗ್ರಾಮೀಣ), ಮಲಕಪ್ಪ ಜೇರಟಗಿ (ವಿಜ ಯಪುರ), ಗಣಪತಿ ಮಾಂಗ್ರೆ (ಉತ್ತರ ಕನ್ನಡ), ಬಸವರಾಜಪ್ಪ ಆರ್‌.ಎಚ್‌. (ದಾವಣಗೆರೆ), ಬಿ. ಲಿಂಗಪ್ಪ (ಮಂಡ್ಯ) ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್‌ಕುಮಾರ್ ಮಾತನಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವ್‌ ಮಠಂದೂರ ಅವರು, ಸಚಿವ ಬಿ. ರಮಾನಾಥ ರೈ ಅವರ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದು, ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಶಿಸ್ತಿನ ಪಕ್ಷ ಎಂದು ಕರೆಯಿಸಿ ಕೊಳ್ಳುವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರೇ ಈ ರೀತಿ ಹೇಳಿಕೆ ನೀಡಿರು ವುದು ಖಂಡನೀಯ. ಅವರು ಕೂಡಲೇ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಮೀನುಗಾರರ ವಿಭಾಗದ ರಾಜ್ಯ ಘಟಕದ ಉಪಾಧ್ಯಕ್ಷ ರಾಮು ಮುಗೇರಾ, ಸುರೇಂದ್ರ ಕಂಬಳಿ, ಇಬ್ರಾಹಿಂ ಕೋಡಿಜಾಲ್‌, ನವೀನ್‌ ಡಿಸೋಜ, ಸಂತೋಷ್‌ಕುಮಾರ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.