ADVERTISEMENT

ಕೃಷಿಕರ ಸಮಸ್ಯೆಗಳಿಗೆ ಕ್ಯಾಂಪ್ಕೊ ಸ್ಪಂದನೆ

ಪಂಜ ಸಹಕಾರಿ ಸಂಘದಲ್ಲಿ ರಬ್ಬರ್ ಖರೀದಿ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 7:18 IST
Last Updated 17 ಜುಲೈ 2017, 7:18 IST
ಪಂಜ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ಸಹಯೋಗದೊಂದಿಗೆ  ಆರಂಭಗೊಂಡ ರಬ್ಬರ್ ಖರೀದಿ ಕೇಂದ್ರವನ್ನು ಕ್ಯಾಂಪ್ಕೋ ನಿರ್ದೇಶಕ  ಕೃಷ್ಣಪ್ರಸಾದ್ ಮಡ್ತಿಲ ಉದ್ಘಾಟಿಸಿದರು.
ಪಂಜ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ಸಹಯೋಗದೊಂದಿಗೆ ಆರಂಭಗೊಂಡ ರಬ್ಬರ್ ಖರೀದಿ ಕೇಂದ್ರವನ್ನು ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಉದ್ಘಾಟಿಸಿದರು.   

ಸುಬ್ರಹ್ಮಣ್ಯ: ಕೃಷಿಕನಿಂದ ಕೃಷಿಕರಿಗಾಗಿ ಇರುವ ಸಂಸ್ಥೆ ಕ್ಯಾಂಪ್ಕೊ ದೇಶದ ನಾಲ್ಕನೇ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದಿದ್ದು,  ಕೃಷಿಕನಿಗೆ ತೊಂದರೆಯಾದಾಗ ಸಂಸ್ಥೆಯು ಖಂಡಿತವಾಗಿಯು ಸ್ಪಂದಿಸತ್ತದೆ ಎಂದು ಮಂಗಳೂರು ಕ್ಯಾಂಪ್ಕೊ ನಿರ್ದೇಶಕ  ಕೃಷ್ಣಪ್ರಸಾದ್ ಮಡ್ತಿಲ ಭರವಸೆ ನೀಡಿದರು.

ಪಂಜ ಪ್ರಾಥಮಿಕ ಕೃಷಿ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೊ ಸಹಯೋಗದೊಂದಿಗೆ ಆರಂಭಗೊಂಡ ರಬ್ಬರ್ ಖರೀದಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ, ‘ನಗದು ಅಪಮೌಲ್ಯ ಸಂದರ್ಭ ಯಾರೂ ಕೂಡ ಖಾಸಗಿಯವರು ಅಡಿಕೆ ಖರೀದಿಸುತ್ತಿರಲಿಲ್ಲ. ಆದರೆ ಕ್ಯಾಂಪ್ಕೊ ಮಿತಿ ನಿಗದಿ ಮಾಡಿ ಅಡಿಕೆ ಖರೀದಿಸಿ ಕೃಷಿಕ ಸದಸ್ಯನ ಸಮಸ್ಯೆಗೆ ಸ್ಪಂದಿಸಿದೆ’ ಎಂದರು.

‘ಮೂರು ತಿಂಗಳ ಹಿಂದೆ ಅಂತರರಾಪ್ಟ್ರೀಯ ಮಾರುಕಟ್ಟೆಯಲ್ಲಿ ಕೊಕ್ಕೊ ಬೆಲೆ ಕುಸಿಯಿತು. ಇದೇ ವೇಳೆ ಇಲ್ಲಿ ಬೆಳೆ ಕೂಡ ದುಪ್ಪಟ್ಟಾಗಿತ್ತು. ಕೊಕ್ಕೊ ಖರೀದಿಸುತ್ತಿದ್ದ ನೆಸ್ಲೆ, ಕ್ಯಾಡ್‌ಬರಿ ಕಂಪೆನಿಯವರು ಪಲಾಯನ ಮಾಡಿದರು. ಆದರೆ ಕ್ಯಾಂಪ್ಕೊ  ಜಾಕೊಲೆಟ್ ಸಂಸ್ಥೆಯು ಕೃಷಿಕನಿಗೆ ನಷ್ಟವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕೃಷಿಕ ತಂದ ಎಲ್ಲ ಕೊಕ್ಕೊವನ್ನು ಖರೀದಿಸಿದೆ. ಅಡಿಕೆ ಧಾರಣೆ ಕುಸಿತ ತಾತ್ಕಾಲಿಕವಷ್ಟೆ. ಜಿಎಸ್‌ಟಿಯಿಂದ ಕೃಷಿಕನಿಗೆ ಲಾಭವಿದ್ದು, ಸರ್ಕಾರಕ್ಕೆ ತೆರಿಗೆ ಕಟ್ಟಿ ವ್ಯವಹರಿಸುವ ಸಂಸ್ಥೆ ನಮ್ಮದು. ಆದ್ದರಿಂದ ದೇಶದ ಅಭಿವೃದ್ಧಿಯಲ್ಲಿ ನಮ್ಮ ಸಂಸ್ಥೆಯ ಸದಸ್ಯರ ಪಾಲು ಇದೆ’ ಎಂದು ಅವರು ಹೇಳಿದರು.

ADVERTISEMENT

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಿ.ಚಂದ್ರಶೇಖರ ಶಾಸ್ತ್ರಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ಲು, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಡಾ.ರಾಮಯ್ಯ ಭಟ್, ಕ್ಯಾಂಪ್ಕೊ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಧರ ಶೆಟ್ಟಿ, ರಬ್ಬರ್ ಮ್ಯಾನೇಜರ್ ರಾಘವೇಂದ್ರ, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಲೋಕೇಶ್ ಬರೆಮೇಲು, ನಿರ್ದೇಶಕರಾದ  ಶ್ರೀಕೃಷ್ಣ ಭಟ್ ಪಟೋಳಿ, ಭಾಸ್ಕರ ಗೌಡ ಚಿದ್ಗಲ್ಲು, ಕೆ.ರಘುನಾಥ ರೈ, ರೇಖಾ ರೈ, ಮೋಹಿನಿ ಬಿ.ಎಲ್, ಗಣೇಶ್ ಪೈ, ವಾಚಣ್ಣ ಕೆ, ಪಿ.ಕೆ.ವಾಸುದೇವ ಗೌಡ ಪಳಂಗಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ  ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲೋಕೇಶ್ ಬರೆಮೇಲು ಸ್ವಾಗತಿಸಿದರು. ನೇಮಿರಾಜ ಪಲ್ಲೋಡಿ ನಿರೂಪಿಸಿದರು. ವಾಚಣ್ಣ ಕೆರೆಮೂಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.