ADVERTISEMENT

‘ಕೃಷಿ ಜನಪದ ಕ್ರೀಡೆಗೆ ಅಪಸ್ವರ ಬೇಡ’

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 4:49 IST
Last Updated 24 ಡಿಸೆಂಬರ್ 2017, 4:49 IST

ಮೂಲ್ಕಿ: ‘ಕೃಷಿ ಬದುಕನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಂಬಳದ ಪರಂಪರೆ ನಡೆದುಕೊಂಡು ಬಂದಿದೆ. ಈ ಜನಪದ ಕ್ರೀಡೆಗೆ ಅಪಸ್ವರ ಸರಿಯಲ್ಲ’ ಎಂದು ಮೂಲ್ಕಿ ಸೀಮೆಯ ಅರಸು ಮನೆತನದ ಎಂ.ದುಗ್ಗಣ್ಣ ಸಾವಂತರು ಹೇಳಿದರು.

ಪಡುಪಣಂಬೂರು ಮೂಲ್ಕಿ ಅರಮನೆಯ ಬಾಕಿಮಾರು ಗದ್ದೆಯಲ್ಲಿ ಶನಿವಾರ ನಡೆದ ಮೂಲ್ಕಿ ಸೀಮೆ ಅರಸು ಕಂಬಳಕ್ಕೆ ಧರ್ಮಚಾವಡಿಯಲ್ಲಿ ಅವರು ಆರಂಭ ಸೂಚಿಸಿ ಮಾತನಾಡಿದರು.

ಪಕ್ಷಿಕೆರೆ ಸಂತ ಜೂದರ ಯಾತ್ರಿಕ ಕೇಂದ್ರದ ಧರ್ಮಗುರು ಆ್ಯಂಡ್ರೋ ಲಿಯೋ ಡಿಸೋಜ ಕಂಬಳಕ್ಕೆ ಚಾಲನೆ ನೀಡಿ, ‘ಸಂಸ್ಕೃತಿ ಕಟ್ಟುವಲ್ಲಿ ನಮ್ಮ ತುಳುನಾಡ ಪರಂಪರೆ ಉತ್ತಮ ವೇದಿಕೆಯಾಗಿದೆ’ ಎಂದರು. ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕೊಲ್ನಾಡು ಉತ್ರುಂಜೆ ಭುಜಂಗ ಎಂ. ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.

ADVERTISEMENT

ಅರಮನೆಯ ಎಂ. ಗೌತಮ್ ಜೈನ್, ಆಶಾಲತಾ, ಪಡುಬಿದ್ರಿ ಬೀಡು ರತ್ನಾಕರ ರಾಜ ಕಿನ್ಯಕ್ಕ ಬಲ್ಲಾಳ್, ಕುಳೂರು ಬೀಡು ವಜ್ರಕುಮಾರ್ ಕರ್ಣಂತಾಯ ಬಲ್ಲಾಳ್, ಪಡುಪಣಂಬೂರು ಪಂಚಾಯಿತಿ ಅಧ್ಯಕ್ಷ ಮೋಹನ್‌ ದಾಸ್‌, ಹಳೆಯಂಗಡಿ ಪಿ.ಸಿ.ಎ.ಬ್ಯಾಂಕ್‌ನ ಅಧ್ಯಕ್ಷ ಎಸ್.ಎಸ್.ಸತೀಶ್ ಭಟ್ ಕೊಳುವೈಲು, ಉದ್ಯಮಿ ಪ್ರಕಾಶ್ ಎನ್. ಶೆಟ್ಟಿ, ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಶೇಖರ್ ಶೆಟ್ಟಿ, ಗಣೇಶ್ ಶೆಟ್ಟಿ ಕಾಪು, ಸಮಿತಿಯ ಗೌರವಾಧ್ಯಕ್ಷರಾದ ಪಂಜಗುತ್ತ ಶಾಂತಾರಾಮ ಶೆಟ್ಟಿ ಹಳೆಯಂಗಡಿ, ಎಂ.ಎಚ್.ಅರವಿಂದ ಪೂಂಜಾ, ಕಾರ್ಯಾಧ್ಯಕ್ಷರುಗಳಾದ ಚಂದ್ರಶೇಖರ್ ಜಿ., ವಿನೋದ್ ಎಸ್. ಸಾಲ್ಯಾನ್ ಬೆಳ್ಳಾಯರು, ಶಶೀಂದ್ರ ಎಂ. ಸಾಲ್ಯಾನ್, ಸುಂದರ್ ದೇವಾಡಿಗ, ದಿನೇಶ್ ಶೆಟ್ಟಿ, ದಿನೇಶ್ ಸುವರ್ಣ, ಶುಭ್ರತ್ ದೇವಾಡಿಗ, ಉಮೇಶ್ ಪೂಜಾರಿ, ಹರ್ಷತ್ ಡಿ. ಸಾಲ್ಯಾನ್, ಸಹ ಕಾರ್ಯದರ್ಶಿಗಳಾದ ನವೀನ್‌ ಕುಮಾರ್ ಬಾಂದಕೆರೆ, ಕಿರಣ್ ಹೊಗೆಗುಡ್ಡೆ, ರಂಜಿತ್ ಪುತ್ರನ್‌, ಕೋಶಾಧಿಕಾರಿ ಕೆ.ವಿಜಯಕುಮಾರ್ ಶೆಟ್ಟಿ, ಸಹ ಕೋಶಾಧಿಕಾರಿ ಮನ್ಸೂರ್ ಎಚ್. ಇದ್ದರು.

ಸಮಿತಿಯ ಅಧ್ಯಕ್ಷ ಕೊಲ್ನಾಡುಗುತ್ತು ರಾಮಚಂದ್ರ ನಾಯ್ಕ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಡ್ಮೆಮಾರ್ ನವೀನ್‌ಕುಮಾರ್ ಶೆಟ್ಟಿ  ವಂದಿಸಿದರು. ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಕರಾವಳಿಯ ವಿವಿಧೆಡೆಯ 100ಕ್ಕೂ ಹೆಚ್ಚು ಕೋಣಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.