ADVERTISEMENT

ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ‘ಮಾನವೀಯ ಸಂಬಂಧ’ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 10:40 IST
Last Updated 25 ಸೆಪ್ಟೆಂಬರ್ 2013, 10:40 IST

ಉಡುಪಿ: ಜೇಸಿಐ ಉದ್ಯಾವರ ಕುತ್ಪಾಡಿ ಸಂಸ್ಥಯು ಉಡುಪಿಯ ಚಂದು ಮೈದಾನ­ದಲ್ಲಿರುವ ಪೊಲೀಸ್ ತರಬೇತಿ ಶಾಲೆಯ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ‘ಮಾನವೀಯ ಸಂಬಂಧಗಳು’ ವಿಷಯ­ದಲ್ಲಿ ಒಂದು ದಿನದ ಕಾರ್ಯಾಗಾರ­ವನ್ನು ಶನಿವಾರ ಆಯೋಜಿಸಲಾಗಿತ್ತು.

ಹೆಚ್ಚುವರಿ ಪೊಲೀಸ್ ವರೀಷ್ಠಾಧಿ­ಕಾರಿ ಸಂತೋಷ್ ಕುಮಾರ್ ಕಾರ್ಯಾ­ಗಾರ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಾವರ ಕುತ್ಪಾಡಿ ಘಟಕದ ಅಧ್ಯಕ್ಷ ಮೈಕಲ್ ಡಿಸೋಜ ವಹಿಸಿದ್ದರು. ಅತಿಥಿಗಳಾಗಿ ವಿವಿಯನ್ ಪಿರೇರಾ, ರತ್ನಾಕರ ಇಂದ್ರಾಳಿ ಇದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಜೇಸಿ ರಾಷ್ಟ್ರೀಯ ತರಬೇತುದಾರ ರಾಜಶ್ರೀ ಬಜೆ, ರಾಂಚಿರವರು ಪೊಲೀಸ್ ಪ್ರಶಿಕ್ಷಣಾರ್ಥಿಯವರಿಗೆ ಮಾನವೀಯ ಸಂಬಂಧಗಳ ಬಗ್ಗೆ ಮಾಹಿತಿ ನೀಡಿದರು.

ರಮೇಶ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ದಯಾನಂದ ಶೆಟ್ಟಿ, ಜೇಸಿ ಸಪ್ತಾಹದ ಮಹಾನಿರ್ದೇಶಕ ಅಶೋಕ್ ಪಾಲನ್, ಹರೀಶ್, ಪೊಲೀಸ್ ಇನ್‌­ಸ್ಪೆಕ್ಟರ್‌ ಆಲಿ ಎ. ಶೇಕ್ ಉಮೇಶ್ ಪಿ., ಆರ್.ಎಸ್.ಐ. ಶ್ರೀನಿವಾಸ್ ಮತ್ತು ಪ್ರಕಾಶ್‌ ಇದ್ದರು. ಈ ಕಾರ್ಯಾಗಾರ­ದಲ್ಲಿ 78 ಜನ ಪೊಲೀಸ್ ಪ್ರಶಿಕ್ಷಣಾ­ರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.