
ಪ್ರಜಾವಾಣಿ ವಾರ್ತೆಬದಿಯಡ್ಕ: ಮಳೆಗಾಲದ ಬಿರುಸಿನ ಮಳೆಗೆ ಬದಿಯಡ್ಕ ಪರಿಸರದ ಅನೇಕ ಪ್ರದೇಶಗಳಲ್ಲಿ ಇನ್ನಷ್ಟು ಹಾನಿ ಸಂಭವಿಸಿದೆ. ಆದರೆ ಯಾವುದೇ ಜೀವಹಾನಿಯಾಗಿಲ್ಲ.
ಮಂಗಳವಾರ ಪಡ್ರೆ ಗ್ರಾಮದ ಐತ್ತಪ್ಪ ನಾಯ್ಕ, ಬದಿಯಡ್ಕದ ಈಶ್ವರ ಭಟ್, ಪಡ್ರೆಯ ನೂರ್ ಮಹಮ್ಮದ್, ಸುಮತಿ, ಸುಬ್ಬಪ್ಪ ಮಣಿಯಾಣಿ ಅವರ ಮನೆ ಮಳೆಯಿಂದಾಗಿ ಭಾಗಶ: ಹಾನಿಗೀಡಾಗಿದೆ. ಪಡ್ರೆಯ ಆನಂದ ರಾವ್ ಮತ್ತು ಸಾವಿತ್ರಿ ಎಂಬವರ ಮನೆಯ ಸಮೀಪದ ಬಾವಿ ಕುಸಿದಿದೆ. ದೇಲಂಪಾಡಿ ಗ್ರಾಪಂ ವ್ಯಾಪ್ತಿಯ ಅಡ್ಕಂ ಆಶ್ರಫ್ ಸೈಮಿ ಎಂಬವರ ಮನೆಯ ಗೋಡೆಯೂ ಕುಸಿದಿದೆ.
ಸೋಮವಾರ ರಾತ್ರಿ ಗುಡ್ಡ ಕುಸಿದು ಮೃತರಾಗಿದ್ದ ಅಡೂರು ಪಳ್ಳಂಗೋಡಿನ ಅಸ್ಮಾ ಹಾಗೂ ಮುಬೀನ್ ಅವರ ಮೃತದೇಹಗಳನ್ನು ಮಂಗಳವಾರ ಮರಣೋತ್ತರ ಪರೀಕ್ಷೆಯ ಬಳಿಕ ಪಳ್ಳಂಗೋಡು ಸರ್ ಸಯ್ಯದ್ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.
ನಂತರ ಪಳ್ಳಂಗೋಡು ಮಹಿಯುದ್ದೀನ್ ಜುಮಾ ಮಸೀದಿಯಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.