ADVERTISEMENT

ಬಿಜೆಪಿ ಅಭ್ಯರ್ಥಿ ಹರಸಿದ ಕಾಂಗ್ರೆಸ್ ಮುಖಂಡ

ಕಾಂಗ್ರೆಸ್‌ನ ಯು.ಕೆ.ಮೋನು, ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 11:10 IST
Last Updated 24 ಏಪ್ರಿಲ್ 2018, 11:10 IST
ತೊಕ್ಕೊಟ್ಟು ಕಾಪಿಕಾಡು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡ ಯು.ಮೋನು ಕಣಚೂರು ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಅವರನ್ನು ಹರಸಿದರು.
ತೊಕ್ಕೊಟ್ಟು ಕಾಪಿಕಾಡು ಬಿಜೆಪಿ ಕಾರ್ಯಾಲಯ ಉದ್ಘಾಟನೆ ಸ್ಥಳದಲ್ಲಿ ಕಾಂಗ್ರೆಸ್ ಮುಖಂಡ ಯು.ಮೋನು ಕಣಚೂರು ಬಿಜೆಪಿ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರ್ ಅವರನ್ನು ಹರಸಿದರು.   

ಉಳ್ಳಾಲ: ಕಾಂಗ್ರೆಸ್ ನ ಹಿರಿಯ ಮುಖಂಡ ಹಾಗೂ  ಜಿಲ್ಲಾ ವಕ್ಫ್ ಬೋರ್ಡ್‌ ಅಧ್ಯಕ್ಷ ಯು.ಕೆ.ಮೋನು ಕಣಚೂರು ಇವರು ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಇವರನ್ನು ಸೋಮವಾರ ಬಿಜೆಪಿ ಕಾರ್ಯಾಲಯ ಉದ್ಘಾಟನೆ ನಡೆಯುವ ಸ್ಥಳದಲ್ಲಿ ಹರಸಿದರು.

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಮತ್ತು ಬಿಜೆಪಿ ಕಾರ್ಯಾಲಯ ಉದ್ಘಾಟನಾ ಸಮಾರಂಭದ ಮೀಟರ್‌ ಅಂತರದಲ್ಲಿ ನಡೆಯುತಿತ್ತು. ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ಆಗಮಿಸುತ್ತಿದ್ದ  ಮುಖಂಡ ಯು. ಮೋನು ಕಣಚೂರು ದಾರಿಮಧ್ಯೆ ನಡೆಯುತ್ತಿದ್ದ ಬಿಜೆಪಿ ಕಾರ್ಯಾಲಯ ಉದ್ಘಾಟನೆಯ ಸ್ಥಳಕ್ಕೆ  ಬಂದಿದ್ದರು.

ಅಲ್ಲಿದ್ದ ಅಭ್ಯರ್ಥಿ ಸಂತೋಷ್ ರೈ ಬೋಳಿಯಾರು ಅವರನ್ನು ಆಲಿಂಗಿಸಿ, ಶುಭಹಾರೈಸಿದರು. ಇದು ಬಿಜೆಪಿ ಕಾರ್ಯಕರ್ತರಲ್ಲಿ ಆಶ್ಚರ್ಯಕ್ಕೆ ಕಾರಣವಾಯಿತು. ಈ  ಚಿತ್ರ ವಾಟ್ಸ್‌ ಆ್ಯಪ್‌ನಲ್ಲಿ ಹರಿದಾಡುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವಿನ ಗುದ್ದಾಟಕ್ಕೆ ಕಾರಣವಾಗಿದೆ.

ADVERTISEMENT

ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ

ಮಂಗಳೂರು ಕ್ಷೇತ್ರ ಬಿಜೆಪಿ ವಿಧಾನಸಭಾ ಚುನಾವಣಾ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಸೋಮವಾರ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ಮುಡಿಪುವಿನ ಶ್ರೀ ಕ್ಷೇತ್ರ ಮುಡಿಪಿನ್ನಾರ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಅಪಾರ ಬೆಂಬಲಿಗರ ಜತೆಗೆ ವಿಶೇಷ ಪೂಜೆ ಸಲ್ಲಿಸಿ ಬಳಿಕ ತೊಕ್ಕೊಟ್ಟುವರೆಗೆ ರೋಡ್ ಷೋ ನಲ್ಲಿ ಭಾಗವಹಿಸಿದರು.

ತೊಕ್ಕೊಟ್ಟು ಕಾಪಿಕಾಡಿನಲ್ಲಿ ಬಿಜೆಪಿ ಚುನಾವಣಾ ಕಾರ್ಯಾಲಯವನ್ನು ಹಿರಿಯ ಮುಖಂಡ ಸೀತಾರಾಮ ಬಂಗೇರ ಉದ್ಘಾಟಿಸಿದರು. ಅಲ್ಲಿ ಮಾತನಾಡಿದ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರ್ ಕಾರ್ಯಕರ್ತರ ಉತ್ಸಾಹ ವಿಶೇಷ ಶಕ್ತಿಯನ್ನು ನೀಡುತ್ತದೆ. ಚುನಾ
ವಣೆಯಲ್ಲಿ ಇದೇ ಉತ್ಸಾಹದಲ್ಲಿ ಭಾಗವಹಿಸಿ ಬಿಜೆಪಿಯನ್ನು ಗೆಲ್ಲಿಸುವ ವಿಶ್ವಾಸವಿದೆ. ತನ್ನನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಕಾರ್ಯಕರ್ತರು, ಮುಖಂಡರಿಗೆ ಅಭಾರಿಯಾಗಿದ್ದೇನೆ. ಗ್ರಾಮಗಳಿಗೆ ಭೇಟಿ ನೀಡಿದಾಗ ಹಿರಿಯರ ಮಾರ್ಗದರ್ಶನ, ಮಹಿಳೆಯರ ಆಶೀರ್ವಾದ, ಕಾರ್ಯಕರ್ತರ ಪ್ರೋತ್ಸಾಹದಿಂದ ಪಕ್ಷಕ್ಕೆ ಬಲ ನೀಡಿದೆ. ಎಲ್ಲಾ ಧರ್ಮೀಯರು ಸೇರಿಕೊಂಡಿರುವ ವಾತಾವರಣ ಗೆಲುವಿನ ಸಂದೇಶ ನೀಡುತ್ತಿದೆ ಎಂದರು.‌ ಕಾಪಿಕಾಡು ಕಾರ್ಯಾಲಯದಿಂದ ತೊಕ್ಕೊಟ್ಟು ಜಂಕ್ಷನ್‌ ವರೆಗೆ ನೂರಾರು ಕಾರ್ಯಕರ್ತರ ಸಮ್ಮುಖದಲ್ಲಿ ಪಾದಯಾತ್ರೆ ನಡೆಸಿ, ಅಲ್ಲಿಂದ ಮಂಗ ಳೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ‌

ಸತೀಶ್ ಕುಂಪಲ, ಚಂದ್ರಹಾಸ್ ಉಳ್ಳಾಲ್, ಚಂದ್ರಶೇಖರ ಉಚ್ಚಿಲ್, ಟಿ.ಜಿ.ರಾಜಾರಾಂ ಭಟ್, ಶರಣ್ ಪಂಪ್‍ವೆಲ್ , ಜಗದೀಶ ಕುವೆತ್ತಬೈಲು, ಅಸ್ಗರ್ ಅಲಿ, ಡಾ. ಮುನೀರ್ ಬಾವ, ನವೀನ್ ಪಾದಲ್ಪಾಡಿ, ಪ್ರೇಮಾನಂದ ರೈ ಇದ್ದರು.

ಉಳ್ಳಾಲ: ‘ಜಾತಿ, ಧರ್ಮ , ಪಕ್ಷವನ್ನು ಕೇಳದ ಮನೆ ಬಾಗಿಲಿಗೆ ಬಂದವರ ಕೆಲಸವನ್ನು ತಾರತಮ್ಯವಿಲ್ಲದೆ ನಿರ್ವಹಿಸಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸುವವರಿಗೆ ಕೆಲಸದ ಮೂಲಕ ಉತ್ತರ ನೀಡಿದ್ದೇನೆ’ ಎಂದು ಮಂಗಳೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಯು.ಟಿ.ಖಾದರ್ ಹೇಳಿದರು.

ಅವರು ತೊಕ್ಕೊಟ್ಟು ಅಂಬಿಕಾರೋಡಿನಲ್ಲಿ ನಾಮಪತ್ರ ಸಲ್ಲಿಸುವ ಪ್ರಯುಕ್ತ ಜರಗಿದ ಕಾರ್ಯಕರ್ತರ ಹಾಗೂ ಅಭಿಮಾನಿಗಳ ಸಭೆಯಲ್ಲಿ  ಅವರು ಮಾತನಾಡಿದರು.  ರಾಜ್ಯಾದ್ಯಂತ ಜನರು ಪಕ್ಷವನ್ನು ಗೆಲ್ಲಿಸಲಿದ್ದಾರೆ. ಭವಿಷ್ಯದಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡಲಿದ್ದಾರೆ’ ಎಂದರು.

ತಲಪಾಡಿ ಗ್ರಾಮ ಪಂಚಾಯಿತಿನ ಬಿಜೆಪಿಯಿಂದ ಆಯ್ಕೆಯಾಗಿದ್ದ, ಮಾಜಿ ಅಧ್ಯಕ್ಷ ಜಯರಾಜ್ ಸಾಲ್ಯಾನ್ ಕಾಂಗ್ರೆಸ್ ಸೇರ್ಪಡೆಗೊಂಡರು.  ಕಾಲ್ನಡಿಗೆ ಜಾಥಾದಲ್ಲಿ ಅಭ್ಯರ್ಥಿ ಯು.ಟಿ. ಖಾದರ್ ತೊಕ್ಕೊಟ್ಟುವಿನಿಂದ ಮಂಗಳೂರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.  ಮುಖಂಡರಾದ ಯು.ಕಣಚೂರು ಮೋನು, ರಾಜಶೇಖರ ಕೋಟ್ಯಾನ್, ಮೊಹಮ್ಮದ್ ಮೋನು, ಈಶ್ವರ ಉಳ್ಳಾಲ್, ಪ್ರಶಾಂತ ಕಾಜವ, ಸಂತೋಷ್ ಶೆಟ್ಟಿ ಅಸೈಗೋಳಿ, ಸದಾಶಿವ ಉಳ್ಳಾಲ, ಎನ್.ಎಸ್. ಕರೀಂ, ದಿನೇಶ್ ಕುಂಪಲ, ಉಸ್ಮಾನ್ ಕಲ್ಲಾಪು, ಯು.ಕೆ. ಮೋನು, ಇಬ್ರಾಹಿಂ ಕೋಡಿಜಾಲ್, ಗಣೇಶ್ ಶೆಟ್ಟಿ ತಲಪಾಡಿ, ಆಲ್ವಿನ್ ಡಿಸೋಜ  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.