ADVERTISEMENT

ಬೆಳ್ತಂಗಡಿ: ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 10:16 IST
Last Updated 10 ಏಪ್ರಿಲ್ 2018, 10:16 IST

ಬೆಳ್ತಂಗಡಿ: ಮೇ 12 ರಂದು ನಡೆಯುವ ಮತದಾನಕ್ಕೆ ಪೂರ್ವಭಾವಿಯಾಗಿ ತಾಲ್ಲೂಕಿನ ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ಕಾರ್ಯಗಾರವನ್ನು ಸೋಮವಾರ ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಸಿದರು.

ತಾಲ್ಲೂಕಿನಲ್ಲಿ 241 ಮತಗಟ್ಟೆಗಳಿದ್ದು 24 ಸೆಕ್ಟರ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಸೋಮವಾರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ 24 ಸೆಕ್ಟರ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಕರಣಿಕರು ಹಾಗೂ ಮಾಸ್ಟರ್ ಟ್ರೈನರ್‍ಗಳಿಗೆ ಮಾಹಿತಿಯನ್ನು ನೀಡಲಾಯಿತು.

‘ಚುನಾವಣಾಧಿಕಾರಿ ಎಚ್. ಆರ್. ನಾಯ್ಕ್ ಅವರು, ಪ್ರತಿಯೊಂದು ಮತಗಟ್ಟೆಯಲ್ಲೂ ಅಚ್ಚುಕಟ್ಟಾದ ರೀತಿಯಲ್ಲಿ ಮತದಾನ ಕಾರ್ಯ ನಡೆಯಬೇಕು. ಒಮ್ಮತ ಹಾಗೂ ಸಮ್ಮತದ ರೀತಿಯಿಂದ ಒಗ್ಗಟ್ಟಾಗಿ ಮತದಾನ ಕೇಂದ್ರದಲ್ಲಿ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಸೆಕ್ಟರ್ ಅಧಿಕಾರಿಗಳು, ಪಿ.ಆರ್.ಒ, ಎ.ಪಿ.ಆರ್.ಒ ಗಳು ಹಾಗೂ ಸಿಬ್ಬಂದಿಗಳು ಮಾಹಿತಿಯನ್ನು ಪಡೆದುಕೊಂಡು ಮತದಾರರಿಗೂ ಮತದಾನದ ಬಗ್ಗೆ ಸೂಕ್ತ ಮಾಹಿತಿಯನ್ನು ಒದಗಿಸಬೇಕು. ಮತಯಂತ್ರದ ಬಗ್ಗೆ ಯಾವುದೇ ಗೊಂದಲಕ್ಕೆ ಎಡೆ ಮಾಡಿ ಕೊಡಬಾರದು. ಅದರ ನಿರ್ವಹಣೆಯ ಬಗ್ಯೆ ನಾವು ಸರಿಯಾಗಿ ಮಾಹಿತಿ ಪಡೆದುಕೊಂಡಲ್ಲಿ ಗೊಂದಲದ ವಾತಾವರಣ ನಿರ್ಮಾಣ ಆಗುವುದಿಲ್ಲ. ಸಮರ್ಪಕ ನಿರ್ವಹಣೆಯಿಂದ ಮತದಾನ ಪ್ರಕ್ರಿಯೆಯನ್ನು ಮಾಡಲು ಎಲ್ಲರ ಸಹಕಾರ ಅಗತ್ಯವಿದೆ’ ಎಂದರು.

ADVERTISEMENT

ಇವಿಎಂ ಹಾಗೂ ವಿವಿ ಪಾಟ್ ತರಬೇತುದಾರ ಜಾನ್ ಪಿಂಟೋ ಮತಯಂತ್ರದ ಬಗ್ಗೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಮೂಲಕ ನಡೆಸಿಕೊಟ್ಟರು. ವಿವಿ ಪಾಟ್‍ನ ಬಗ್ಯೆ ಯಾವುದೇ ಗೊಂದಲ ಬೇಡ. ಅದನ್ನು ನಿರ್ವಹಿಸುವ ಕುರಿತು ನಾವು ಕಲಿತುಕೊಂಡರೆ ಏನು ಸಮಸ್ಯೆ ಬಾರದು ಎಂದರು.

ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್ ತಮ್ಮಣ್ಣ ಚಿನ್ನಪ್ಪ ಹಾದಿಮನಿ, ನೋಡೆಲ್ ಅಧಿಕಾರಿ ಸಣ್ಣರಂಗಯ್ಯ, ತಾಪಂ ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಕೆ. ಅಯ್ಯಣ್ಣನವರ್ ಮಾಹಿತಿಯನ್ನು ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.