ADVERTISEMENT

ಬ್ರಹ್ಮಾವರ: 15ದಿನಗಳ ನಂತರ ಹೋರಾಟ

ಮೇಲ್ಸೇತುವೆ, ನೆಲಮಟ್ಟದಲ್ಲಿ ರಸ್ತೆ ರಚನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:34 IST
Last Updated 20 ಸೆಪ್ಟೆಂಬರ್ 2013, 9:34 IST

ಬ್ರಹ್ಮಾವರ: ಚತುಷ್ಪಥ ಕಾಮಗಾರಿಯಿಂದ ಉದ್ಭವಿಸಿರುವ ಸಮಸ್ಯೆಗಳ ಪರಿಹಾರ ಮತ್ತು ಮೇಲ್ಸೇತುವೆ ನಿರ್ಮಾಣದ ಆಗ್ರಹದ ಬಗ್ಗೆ ಚರ್ಚಿಸಲು ಬುಧವಾರ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ 15 ದಿನಗಳ ಒಳಗೆ ಪ್ರಸ್ತುತ ಆಗುತ್ತಿರುವ ಸಮಸ್ಯೆಯ ಬಗ್ಗೆ ಕೇಂದ್ರಕ್ಕೆ ವರದಿ ನೀಡುವ ಭರವಸೆ ನೀಡಿರುವುದರ ಹಿನ್ನೆಲೆಯಲ್ಲಿ ಅವಧಿ ಮುಗಿದ ಬಳಿಕ ಚರ್ಚಿಸಿ ನಿರ್ಧರಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಉಳಿಸಿ ಸಮಿತಿಯ ಸಂಚಾಲಕ ಗೋವಿಂದ ರಾಜ್ ಹೆಗ್ಡೆ  ಹೇಳಿದರು.

ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಬಸ್ ನಿಲ್ದಾಣದ ಬಳಿ ಈಗ ನಿರ್ಮಾಣ­ವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ನಿಲ್ಲಿಸಿ ನೂತನವಾಗಿ ಮೇಲ್ಸೇತುವೆ ಅಥವಾ ನೆಲಮಟ್ಟದಲ್ಲಿ ರಸ್ತೆ ರಚನೆಗೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 66 ಉಳಿಸಿ ಹೋರಾಟ ಸಮಿತಿ ಮತ್ತು ವಿವಿಧ ಸ್ಥಳೀಯ ಸಂಘ ಸಂಸ್ಥೆಗಳು ಗುರುವಾರ ಕರೆ ನೀಡಿದ್ದ ಬ್ರಹ್ಮಾವರ ಬಂದ್ ಸಂದರ್ಭ ಅವರು ಮಾತನಾಡಿದರು.

2010ರಲ್ಲಿ ಚತುಷ್ಪಥ ಕಾಮಗಾರಿ ಆರಂಭ­ವಾಗಿ ಕಳೆದ ನವೆಂಬರ್‌ನಲ್ಲಿ ಮುಗಿಯ­ಬೇಕಿತ್ತು. ಆದರೆ ಇನ್ನೂ ಕೂಡಾ ಕಾಮಗಾರಿ ಮುಗಿದಿಲ್ಲ. ಬ್ರಹ್ಮಾವರ ಬಸ್ಸುನಿಲ್ದಾಣದ ಬಳಿ ನಿರ್ಮಿಸಲು ಉದ್ದೇಶಿಸಿದ್ದ ಅಂಡರ್‌ಪಾಸ್ ಕಾಮಗಾರಿಯನ್ನು ಸ್ಥಳೀಯರು ವಿರೋಧಿಸಿ­ದ್ದರು.  ಗೊಂದಲಯುಕ್ತ ರಸ್ತೆ ನಿರ್ಮಾಣದಿಂದ ಬ್ರಹ್ಮಾವರದಿಂದ ಪೇತ್ರಿ ಕಡೆಗೆ ಹೋಗುವ ದಾರಿ, ಬ್ರಹ್ಮಾವರ ಬಸ್‌­ನಿಲ್ದಾಣ, ಒಳಪೇಟೆ ಪ್ರವೇಶ, ಬಾರ್ಕೂರು ಮತ್ತು ಮಂದರ್ತಿಗೆ ಉಡುಪಿ ಮತ್ತು ಕುಂದಾ­ಪುರ­ಕ್ಕೆ ತೆರಳುವ ಬಗ್ಗೆ ಸಾರ್ವ­ಜನಿಕರಲ್ಲಿ ಕಳವಳ ಉಂಟಾಗಿದೆ. ಬ್ರಹ್ಮಾವರ ಬೈಪಾಸ್‌ನಲ್ಲಿ ಮೇಲ್ಸೆ­ತುವೆ ಅಥವಾ ನೆಲ­ಮಟ್ಟದಲ್ಲಿ ರಸ್ತೆ ರಚನೆಯ ಬೇಡಿಕೆ ಮುಂದಿಟ್ಟು ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್ ಫರ್ನಾಂಡಿ­ಸ್ ಅವರಿಗೆ ಮೂರು ಬಾರಿ ಮನವಿ ಸಲಿಸಿದ್ದರೂ ಯಾವುದೇ ಸ್ಪಂದನೆ ದೊರ­ಕಿಲ್ಲ. ಆದ್ದರಿಂದ ಬ್ರಹ್ಮಾವರ ಬಂದ್ ಮಾಡು­ವ ಕಾರ್ಯಕ್ರಮ ಹಮ್ಮಿಕೊಳ್ಳ­ಬೇಕಾ­ಯಿತು.

ಬ್ರಹ್ಮಾವರ ಬೈಪಾಸ್‌ನಲ್ಲಿ ಮೇಲ್ಸೆತುವೆ ಅಥವಾ ನೆಲಮಟ್ಟದಲ್ಲಿ ರಸ್ತೆ ರಚನೆಯ ಬೇಡಿಕೆ ಮುಂದಿಟ್ಟು ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ಮೂರು ಬಾರಿ ಮನವಿ ಸಲಿಸಿದ್ದರೂ ಯಾವುದೇ ಸ್ಪಂದನೆ ದೊರಕಿಲ್ಲ. ಆದ್ದರಿಂದ ಬ್ರಹ್ಮಾವರ ಬಂದ್ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಾಯಿತು.

ಇದೇ ಸಂದರ್ಭ ಜಿಲ್ಲಾಧಿಕಾರಿ ಅವರು ಮಾತುಕತೆ ನಡೆಸಿ 15ದಿನದ ಕಾಲಾವಕಾಶ ಕೇಳಿದರು. ಆದ್ದರಿಂದ ಇದೇ 27ರಂದು ಕರೆ ನೀಡಿದ್ದ ಜನಪ್ರತಿನಿಧಿಗಳ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಖಾ­ಮುಖಿಯನ್ನು ಅ.5ಕ್ಕೆ ಮುಂದೂಡಲಾಗಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಅವೈಜ್ಞಾನಿಕವಾದ ಮತ್ತು ಸಮಸ್ಯೆ­ಗಳನ್ನು ತಂದಿಕ್ಕುವ ಇಂತಹ ಕಾಮಗಾರಿಗಳ ವಿರುದ್ಧ ಹೋರಾಟ ನಡೆಸಲೇ ಬೇಕು. ಇಲ್ಲಿನ ಸಮಸ್ಯೆಗೆ ಪರಿಹಾರ ದೊರಕದೇ ಇದ್ದಲ್ಲಿ ಅಂಡರ್‌­ಪಾಸ್ ಕಾಮಗಾರಿಯನ್ನು ಸಾರ್ವಜನಿಕರೆಲ್ಲ ಸೇರಿ ಸ್ಥಗಿತಗೊಳಿಸೋಣ ಎಂದು ಹೇಳಿದರು.

ಈ ಸಂದರ್ಭ ಪ್ರಮುಖರಾದ ಸುಪ್ರಸಾದ್ ಶೆಟ್ಟಿ, ಇರ್ಮಾಡಿ ತಿಮ್ಮಪ್ಪ ಹೆಗ್ಡೆ, ಡಾ.ಕೆ.ಪಿ ಶೆಟ್ಟಿ, ಸಿ.ಪಿ.ಎಮ್.ನ ವಿಠಲ್ ಪೂಜಾರಿ, ಅಲೆವೂರು ಯೋಗೀಶ್ ಆಚಾರ್ಯ, ಬಾರ್ಕೂರು ಸತೀಶ್ ಪೂಜಾರಿ, ಸುಧೀರ್‌ಕುಮಾರ್ ಶೆಟ್ಟಿ, ಶೇಡಿ­ಕೊಡ್ಲು ವಿಠಲ ಶೆಟ್ಟಿ, ರಘುಪತಿ ಬ್ರಹ್ಮಾವರ, ಮೋಹನ್ ಶೆಟ್ಟಿ, ದಿನಕರ ಹೇರೂರು ಮತ್ತಿತರ­ರು ಉಪಸ್ಥಿತರಿದ್ದರು. ನಂತರ ಸಾಂಕೇತಿಕವಾಗಿ 15ನಿಮಿಷಗಳ ಕಾಲ ಹೆದ್ದಾರಿ ತಡೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.