ADVERTISEMENT

ಮಂಗಳೂರು-ದುಬೈ ವಿಮಾನ ಜ. 3ರಿಂದ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 7:12 IST
Last Updated 27 ಡಿಸೆಂಬರ್ 2012, 7:12 IST

ಮಂಗಳೂರು: ಜೆಟ್ ಏರ್‌ವೇಸ್ ಸಂಸ್ಥೆಯು ಮಂಗಳೂರು- ದುಬೈ ನಡುವೆ ವಿಮಾನಯಾನ ಸೇವೆಯನ್ನು 2013ರ ಜನವರಿ 3ರಿಂದ ಆರಂಭಿಸಲಿದೆ. 170 ಎಕಾನಮಿ ದರ್ಜೆಯ ಆಸನ ವ್ಯವಸ್ಥೆ ಇರುವ ಬೋಯಿಂಗ್ 737-800 ವಿಮಾನವು ವಾರದಲ್ಲಿ ಆರು ಬಾರಿ ಮಂಗಳೂರು- ದುಬೈ ನಡುವೆ ಸಂಚರಿಸಲಿದೆ.

ನೂತನ ವಿಮಾನವು (9ಡಬ್ಲ್ಯು 532) ಬಂದರು ನಗರಿ ಮಂಗಳೂರಿನ ವಿಮಾನನಿಲ್ದಾಣದಿಂದ ಪ್ರತಿ ಸೋಮವಾರ, ಬುಧವಾರ, ಗುರುವಾರ ಹಾಗೂ ಭಾನುವಾರ ರಾತ್ರಿ 8 ಗಂಟೆಗೆ ನಿರ್ಗಮಿಸಲಿದ್ದು, ರಾತ್ರಿ 10.30ಕ್ಕೆ (ಸ್ಥಳೀಯ ಕಾಲಮಾನ) ದುಬೈ ತಲುಪಲಿದೆ. ಅಂತೆಯೇ ದುಬೈ ವಿಮಾನನಿಲ್ದಾಣದಿಂದ ಪ್ರತಿ ಸೋಮವಾರ, ಬುಧವಾರ, ಗುರುವಾರ ಹಾಗೂ ಭಾನುವಾರ ರಾತ್ರಿ 11.30ಕ್ಕೆ (ಸ್ಥಳೀಯ ಕಾಲಮಾನ) ಗಂಟೆಗೆ ಹೊರಡುವ ವಿಮಾನವು (9ಡಬ್ಲ್ಯು 531) ಮರುದಿನ ಬೆಳಿಗ್ಗೆ 4.30ಕ್ಕೆ (ಸ್ಥಳೀಯ ಕಾಲಮಾನ) ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ.

ವಿಮಾನವು (9ಡಬ್ಲ್ಯು 532) ಶುಕ್ರವಾರ ರಾತ್ರಿ 7 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದು, ರಾತ್ರಿ 9.30 (ಸ್ಥಳೀಯ ಕಾಲಮಾನ) ದುಬೈ ತಲುಪಲಿದೆ. ದುಬೈನಿಂದ ರಾತ್ರಿ 10.30ಕ್ಕೆ (ಸ್ಥಳೀಯ ಕಾಲಮಾನ) ಹೊರಡುವ ವಿಮಾನ (9ಡಬ್ಲ್ಯು 531) ಮರುದಿನ ಮುಂಜಾನೆ 3.30ಕ್ಕೆ  (ಸ್ಥಳೀಯ ಕಾಲಮಾನ) ಮಂಗಳೂರು ತಲುಪಲಿದೆ.

ವಿಮಾನವು (9ಡಬ್ಲ್ಯು 532) ಮಂಗಳವಾರ ರಾತ್ರಿ 7.40ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದು, ರಾತ್ರಿ 10.10ಕ್ಕೆ (ಸ್ಥಳೀಯ ಕಾಲಮಾನ) ದುಬೈ ತಲುಪಲಿದೆ. 

`ಮಂಗಳೂರು-ದುಬೈ ನಡುವೆ ವಿಮಾನಯಾನ ಸೇವೆ ಆರಂಭಿಸುವ ಮೂಲಕ ಜೆಟ್ ಏರ್‌ವೇಸ್ ಸಂಸ್ಥೆಯು ಯುಎಇಯಲ್ಲಿ ನೆಲೆಸಿರುವ ಭಾರತೀಯರಿಗೆ ಅನುಕೂಲ ಕಲ್ಪಿಸಲಿದೆ. ಈ ನೂತನ ಸೇವೆಯಿಂದ ಗಲ್ಫ್ ರಾಷ್ಟ್ರಗಳಲ್ಲಿ ಜೆಟ್ ಏರ್‌ವೇಸ್ ಸಂಸ್ಥೆ ಮತ್ತಷ್ಟು ಬಲಗೊಳ್ಳಲಿದೆ' ಎಂದು ಸಂಸ್ಥೆಯ ಮುಖ್ಯ ವಾಣಿಜ್ಯ ಅಧಿಕಾರಿ ಸುಧೀರ್ ರಾಘವನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.