ADVERTISEMENT

ವಿದೇಶಿಗರ ಕೈಯಲ್ಲಿ ಅರಳಿದ ಕಲಾ ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 11:42 IST
Last Updated 21 ಮಾರ್ಚ್ 2018, 11:42 IST

ಮಂಗಳೂರು: ನಗರದ ಸೇಂಟ್‌ ಅಲೋ ಶಿ‌ಯಸ್‌ ಕಾಲೇಜಿನಲ್ಲಿ ಸೋಮವಾರ ನಡೆದ ‘ಪಾರಂಪರಿಕ’ ಕಲಾ ಪ್ರದರ್ಶನದಲ್ಲಿ ಅಮೆರಿಕದ   ಸ್ಟೇಟ್‌ ಯುನಿರ್ವಸಿಟಿ ಆಫ್‌ ನ್ಯೂಯಾರ್ಕ್‌ನ ವಿದ್ಯಾರ್ಥಿಗಳಾದ ಆಶಾ ಗೋಲ್ಡ್‌ಬರ್ಗ್, ಬ್ರೋಕ್‌ ವೆನ್‌ಸ್ಟೈನ್‌ ಹಾಗೂ ಕ್ಲೇರ್‌ ಬೊಗಾರ್ಟ್‌ ರಚಿಸಿದ ಕಲಾಚಿತ್ರಗಳನ್ನು ಪ್ರದರ್ಶನಕ್ಕಿಡಲಾಯಿತು.

‘ವಿದೇಶಿ ಅಭ್ಯಾಸ ಹಾಗೂ ವಿಚಾರ ವಿನಿಮಯ ಕಾರ್ಯಕ್ರಮದಡಿ ಮಂಗಳೂರಿಗೆ ಬಂದ ಈ ಮೂವರು ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಾಗಿ ಕಲಾ ಚಿತ್ರ ರಚಿಸುವ ವಿಭಾಗವನ್ನು ಆಯ್ಕೆ ಮಾಡಿಕೊಂಡರು. ಕಳೆದ 2 ತಿಂಗಳ ಅವಧಿಯಲ್ಲಿ ಮೈಸೂರು ಸಾಂಪ್ರದಾಯಿಕ, ಮೊಘಲ್‌, ರಾಜಸ್ಥಾನ್‌, ವಾರ್ಲಿ ಕಲಾಪ್ರಕಾರಗಳನ್ನು ಕಲಿತಿದ್ದಾರೆ. ತಮ್ಮ ದೇಶದಲ್ಲಿಯೂ ಇದನ್ನು ಮುಂದುವರಿಸಲು ಆಸಕ್ತಿ ಹೊಂದಿದ್ದಾರೆ’ ಎಂದು ಚಿತ್ರಕಲಾ ಶಿಕ್ಷಕ ಜಾನ್‌ ಚಂದ್ರನ್‌ ಅವರು ಮಾಹಿತಿ ನೀಡಿದರು.

ಪ್ರಾಂಶುಪಾಲ ಡಾ.ಪ್ರವೀಣ್‌ ಮಾರ್ಟೀಸ್‌ ಹಾಗೂ ಫಾ.ಜೆರಾಲ್ಡ್‌ ಫುರ್ಟಾದೋ ಉದ್ಘಾಟಿಸಿದರು. ಕುಲಸಚಿವ ಪ್ರೊ.ನರಹರಿ ಉಪಸ್ಥಿತರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.