ಬೆಳ್ತಂಗಡಿ: ಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಪರಿಶುದ್ಧ ಮನಸ್ಸಿನಿಂದ ಭಕ್ತಿ, ಶ್ರದ್ಧೆ ಮತ್ತು ಏಕಾಗ್ರತೆಯಿಂದ ಶಿವಮಾನ ಸ್ಮರಣೆ ಮಾಡಿದರೆ ನಮ್ಮ ಕಷ್ಟಗಳೆಲ್ಲ ಪರಿಹಾರವಾಗಿ ಶುಭೋದಯವಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದಲ್ಲಿ ಬುಧವಾರ ಶಿವರಾತ್ರಿ ಸಂದರ್ಭದಲ್ಲಿ ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಇಂದ್ರಿಯಗಳ ನಿಗ್ರಹವೇ ಶಿವಧ್ಯಾನದ ಉದ್ದೇಶವಾಗಿದೆ. ‘ಮಾತುಬಿಡ ಮಂಜುನಾಥ’ ಎಂಬಂತೆ ನಾವು ಆಡುವ ಮಾತಿಗೂ, ಕೃತಿಗೂ ಅಂತರ ಇರಬಾರದು ಶಿವಭಕ್ತಿಯಿಂದ ಬದುಕಿನ ಕಷ್ಟ-ನಷ್ಟಗಳೆಲ್ಲ ಮಾಯವಾಗಿ ಬದುಕು ಸುಖ-ಶಾಂತಿ, ನೆಮ್ಮದಿಯಿಂದ ಕೂಡಿರುತ್ತದೆ. ಮಕ್ಕಳಿಗೆ ಭಕ್ತಿ ಮತ್ತು ಭಜನೆಯ ಸಂಸ್ಕಾರ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಶಿವರಾತ್ರಿಯಂದು ಭಗವಂತನು ರಥ ವಿಹಾರದ (ರಥೋತ್ಸವ) ಮೂಲಕ ಸರ್ವರಿಗೂ ದರ್ಶನ ನೀಡುವುದರಿಂದ ಭಕ್ತರು ಈ ಅವಕಾಶದ ಸುದುಪಯೋಗ ಪಡೆದುಕೊಳ್ಳಬೇಕು. ಭಕ್ತರು ಮತ್ತು ಅತಿಥಿಗಳು ಭಗವಂತನಷ್ಟೇ ಶ್ರೇಷ್ಠರು ಎಂದು ಹೇಳಿದರು. ಹೇಮಾವತಿ ವಿ. ಹೆಗ್ಗಡೆ, ಸುಪ್ರಿಯಾ ಹರ್ಷೇಂದ್ರ ಕುಮಾರ್, ಏರ್ಯ ಲಕ್ಷ್ಮಿನಾರಾಯಣ ಆಳ್ವ ಮತ್ತು ಬೆಂಗಳೂರಿನ ಸ್ವಾಮಿದಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.