ADVERTISEMENT

ಶ್ರೇಷ್ಠ ಕೃತಿ ಮೂಲಕವೇ ಸಾಹಿತಿ ನೆನಪು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 9:35 IST
Last Updated 18 ಫೆಬ್ರುವರಿ 2011, 9:35 IST

ಪುತ್ತೂರು: ಉಪನ್ಯಾಸಕ ಗಣರಾಜ ಕುಂಬ್ಳೆ  ಹೇಳಿದ ಸಾಹಿತಿ ಚಿರಂತನವಾಗಿ ನೆನಪಿನಲ್ಲಿ ಉಳಿಯುವುದು ಕೃತಿಗಳ ಮೂಲಕ ಮಾತ್ರ ಎಂದು ರಾಮಕುಂಜದ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ರು. ಪುತ್ತೂರಿನ ಅನುರಾಗ ಆವರಣದಲ್ಲಿ ನಡೆದ ‘ಸಾಹಿತ್ಯ ಕಲಾ ಕುಶಲೋಪರಿ ಸಂಸ್ಕೃತಿ ಸಲ್ಲಾಪ’ದಲ್ಲಿ  ಮಂಗಳವಾರ  ನಡೆದ ‘ಮಶರಾ’ ಸ್ಮರಣಾ(ಮಚ್ಚಿಮಲೆ ಶಂಕರನಾರಾಯಣ ರಾವ್) ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

ಧರ್ಮದಲ್ಲಿ ತತ್ವ ಮುಖ್ಯವಲ್ಲ. ತತ್ವಗಳ ಪ್ರಯೋಗವೇ ಮುಖ್ಯ  ಎಂಬ ಚಿಂತನೆಯನ್ನು ನೀಡಿ ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸಿರುವ ಮಚ್ಚಿಮಲೆ ಶಂಕರನಾರಾಯಣ ರಾವ್ ಮಕ್ಕಳ ಮತ್ತು ಪ್ರೌಢ  ಕೃತಿ, ಕವನ. ಲೇಖನಗಳ ಮೂಲಕ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು. ಅವರ ಕೃತಿಗಳನ್ನು ಪ್ರಕಟಿಸುವ ಮೂಲಕ ಅವರ ಚಿಂತನೆಗಳನ್ನು ಚಿರಂತನವಾಗಿ ಉಳಿಸುವ ಕೆಲಸವಾಗಬೇಕು  ಎಂದವರು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಉಪನ್ಯಾಸಕ ಪ್ರೊ. ಹರಿನಾರಾಯಣ ಮಾಡಾವು ಮಾತನಾಡಿ, ನಾಡಿನ ಮಕ್ಕಳ ಬಗ್ಗೆ ಮಚ್ಚಿಮಲೆ ಶಂಕರನಾರಾಯಣ ರಾವ್  ಅವರಿಗೆ ಅಪಾರ ಕಾಳಜಿಯಿತ್ತು. ಪುತ್ತೂರಿನ ಜನತೆಯ ಪಾಲಿಗೆ ಅವರು ಸದಾ ಸ್ಮರಣೀಯರು ಎಂದರು.ಕಾರ್ಯಕ್ರಮ ಸಂಘಟಕ, ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್, ಜೊಹರಾ ನಿಸಾರ್ ಅಹ್ಮದ್, ಕೃಷ್ಣ ಭಟ್, ಗಂಗಾಧರ ಬೆಳ್ಳಾರೆ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.