ADVERTISEMENT

ಸಾಹಿತ್ಯ ಮನಸ್ಸನ್ನು ರಂಜಿಸುತ್ತದೆ-ಸತ್ಯಭಾಮಾ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 7:50 IST
Last Updated 13 ಜುಲೈ 2012, 7:50 IST

ಕಾರ್ಕಳ: ಸಾಹಿತ್ಯ ಮನಸ್ಸನ್ನು ರಂಜಿಸುತ್ತದೆ, ಮನಸ್ಸನ್ನು ಬದಲಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ನಿವೃತ್ತ ಉಪನ್ಯಾಸಕಿ ಸತ್ಯಭಾಮಾ ತಿಳಿಸಿದರು.

ಎಸ್.ವಿ.ಟಿ . ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಕಾಲೇಜಿನ `ನೇಸರ~  ಹಸ್ತಪತ್ರಿಕೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಸಾಹಿತ್ಯವು ಮನಸ್ಸಿಗೆ ನಾಟುತ್ತದೆ. ಬಾಲ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ಕತೆ, ಕವನ, ಲೇಖನಗಳ ಮೂಲಕ ಅಭಿವ್ಯಕ್ತಿಪಡಿಸಿದಾಗ ಮತ್ತು ಅದಕ್ಕೆ ಪೂರಕ ಪರಿಸರ ಒದಗಿ ಬಂದಾಗ ವಿದ್ಯಾರ್ಥಿ ಪ್ರತಿಭೆ ಬೆಳಗಲು ಸಾಧ್ಯ ಎಂದರು.

ಕಾಲೇಜಿನ ವಿಜ್ಞಾನ ಸಂಘ, ಗಣಿತ ಸಂಘ, ಹೆಲ್ತ್ ಕ್ಲಬ್‌ಗಳ ಉದ್ಘಾಟಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಅಜೆಕಾರು ಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಸಾಧನಾ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಾಲೆಯ ಪಠ್ಯ-ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುವುದರಿಂದ ನಾಯಕತ್ವ ಗುಣಗಳನ್ನು ಬೆಳಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿ ದೆಸೆಯಲ್ಲಿನ ಶಿಸ್ತು, ಏಕಾಗ್ರತೆ ಉತ್ತಮ ನಾಯಕನಾಗಿ ಮೂಡಿ ಬರಲು ಸಹಕಾರಿ ಎಂದರು.

ಪ್ರಾಂಶುಪಾಲೆ ಶ್ಯಾಮಲಾ ಬೇವಿಂಜೆ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ಜೆ. ಕೃಷ್ಣವೇಣಿ, ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಶ್ವೇತಾ ಶೆಟ್ಟಿ, ಕಾರ್ಯದರ್ಶಿ ಲೊಲಿಟಾ ರಿನಿಲ್ಲಾ ಲೋಬೋ, ಶುಚಿತಾ ಮತ್ತಿತರರು ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.