ADVERTISEMENT

ಸುಸಜ್ಜಿತ ಮಾದರಿ ಮತಗಟ್ಟೆ ರಚನೆ

ಕಲ್ಲಂಗಳ ಸರ್ಕಾರಿ ಆಶ್ರಮ ಶಾಲೆ ಮತಗಟ್ಟೆ; ಮದುವೆ ಮನೆಯಂತೆ ಸಿಂಗಾರ

​ಪ್ರಜಾವಾಣಿ ವಾರ್ತೆ
Published 12 ಮೇ 2018, 5:44 IST
Last Updated 12 ಮೇ 2018, 5:44 IST

ವಿಟ್ಲ: ಈ ಬಾರಿಯ ವಿಧಾನ ಸಭಾ ಚುನಾವಣೆ ಹಲವು ವಿಶೇಷತೆಗಳನ್ನು ಹೊಂದಿ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ.

ವಿಟ್ಲ ಹೋಬಳಿಯ ಏಕೈಕ ಮಾದರಿ ಮತಗಟ್ಟೆ (ಮತಗಟ್ಟೆ ಸಂಖ್ಯೆ 91)ಕೇಪು ಗ್ರಾಮದ ಕಲ್ಲಂಗಳ ಪರಿಶಿಷ್ಟ ವರ್ಗಗಳ ಸರ್ಕಾರಿ  ಆಶ್ರಮ ಶಾಲೆಯಲ್ಲಿದ್ದು, ಮದುವೆ ಮನೆಯ ರೀತಿಯಲ್ಲಿ ಸಿಂಗಾರಗೊಂಡಿದೆ; ಮತದಾರರಿಗಾಗಿ ಕಾಯುತ್ತಿದೆ.

ಮತದಾರರನ್ನು ಮತದಾನದತ್ತ ಆಕರ್ಷಿಸುವ ಉದ್ದೇಶದಿಂದ ಚುನಾವಣಾ ಆಯೋಗ ಹೊರಡಿಸಿದ ಆದೇಶದ ಮೇರೆಗೆ ಪುತ್ತೂರು ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೃಷ್ಣಮೂರ್ತಿ ನಿರ್ದೇಶನದ ಮೇರೆಗೆ ವಿಟ್ಲ ಕಂದಾಯ ನಿರೀಕ್ಷರಾದ ದಿವಾಕರ್ ಮತ್ತು ಗ್ರಾಮಕರಣಿಕರು ಸಿದ್ದ ಪಡಿಸಿದ ಮಾದರಿ ಚುನಾವಣಾ ಮತಗಟ್ಟೆ ಮತದಾರರನ್ನು ಕೈಬೀಸಿ ಕರೆಯುತ್ತಿದೆ.

ADVERTISEMENT

653 ಪುರುಷರು ಹಾಗೂ 644 ಮಹಿಳಾ ಮತದಾರರಿದ್ದು, ಮುಖ್ಯ ರಸ್ತೆಯಿಂದಲೇ ಮತಗಟ್ಟೆವರೆಗೆ  ರಸ್ತೆಯನ್ನು ಸಿಂಗರಿಸಲಾಗಿದ್ದು, ಎಲ್ಲರನ್ನು ಆಕರ್ಷಿಸುತ್ತಿದೆ. ಸ್ವಾಗತ ಕಮಾನು, ಶಾಮಿಯಾನ ಅಳವಡಿಸಿ ನೆರಳಿಗೆ ಬೇಕಾದ ವ್ಯವಸ್ಥೆಯನ್ನು ಒದಗಿಸಲಾಗಿದೆ. ಮತದಾರರು ಬರುತ್ತಿದ್ದಂತೆಯೇ ನೀರು ಬೆಲ್ಲ ನೀಡುವ ಮೂಲಕ ಸ್ವಾಗತ ಸಿಗಲಿದೆ.

ಈ ಮತಗಟ್ಟೆಯಲ್ಲಿ ಅಂಗವಿಕಲರಿಗೆ, ವಯಸ್ಕರಿಗೆ, ಗರ್ಭಿಣಿಯರಿಗೆ ಮೊದಲ ಪ್ರಾಶಸ್ಯ  ಸಿಗಲಿದ್ದು, ಯಾವುದೇ ಕ್ಯೂ ಇಲ್ಲದೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಯೂ ನಿಂತವರಿಗೆ ಆಯಾಸವಾದಾಗ ಕುಳಿತುಕೊಳ್ಳಲು 100 ಆಸದ ವ್ಯವಸ್ಥೆ ಸಿದ್ಧಪಡಿಸಲಾಗಿದೆ.

ಮಹಿಳೆಯರಿಗೆ ಪುರುಷರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಆರೋಗ್ಯ ವಾಹಿನಿ, ಸಹಾಯವಾಣಿ ಸೇರಿ ವಿವಿಧ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.