ADVERTISEMENT

ಸ್ಕೌಟ್ಸ್‌-ಗೈಡ್ಸ್‌: 35 ಮಂದಿ ರಕ್ತದಾನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2011, 8:40 IST
Last Updated 21 ಏಪ್ರಿಲ್ 2011, 8:40 IST
ಸ್ಕೌಟ್ಸ್‌-ಗೈಡ್ಸ್‌: 35 ಮಂದಿ ರಕ್ತದಾನ
ಸ್ಕೌಟ್ಸ್‌-ಗೈಡ್ಸ್‌: 35 ಮಂದಿ ರಕ್ತದಾನ   

ಮಂಗಳೂರು: `ಪ್ರತಿ ವ್ಯಕ್ತಿ ಮೇಲೂ ಸಮಾಜದ ಋಣವಿದ್ದು ರಕ್ತದಾನ ಮೂಲಕ ತೀರಿಸಬಹುದು. ರಕ್ತದಾನದಂತಹ ಸಮಾಜ ಸೇವಾ ಕಾರ್ಯಗಳಲ್ಲಿ ಯುವಜನ ಹೆಚ್ಚು ಪಾಲ್ಗೊಳ್ಳಬೇಕು~ ಎಂದು ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಕಾರ್ಯದರ್ಶಿ ವಸಂತ ರಾವ್‌ ಹೇಳಿದರು.

ಬರ್ಕೆ ಪೊಲೀಸ್‌ ಠಾಣೆ, ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌, ಹಾಗೂ ಉರ್ವ ಕೆನರಾ ಹೈಸ್ಕೂಲ್‌ ಎನ್‌ಸಿಸಿ ಕೆಡೆಟ್ಸ್‌ ವತಿಯಿಂದ ನಗರದ ಲಾಲ್‌ಬಾಗ್‌ನ ಭಾರತ್‌ ಸೌಟ್ಸ್‌ ಮತ್ತು ಗೈಡ್ಸ್‌  ಭವನದಲ್ಲಿ ಬುಧವಾರ ನಡೆದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಶಿಬಿರದಲ್ಲಿ ಒಟ್ಟು 35 ಮಂದಿ ರಕ್ತದಾನ ಮಾಡಿದರು.

ಬರ್ಕೆ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಶಿವಪ್ರಕಾಶ್‌ ಮಾತನಾಡಿ, `ನಗರ ಪೊಲೀಸ್‌ ಆಯುಕ್ತರ ಪ್ರೇರಣೆಯಿಂದ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬರ್ಕೆ ಠಾಣೆಯ ಎಲ್ಲಾ ಸಿಬ್ಬಂದಿ ರಕ್ತದಾನದಲ್ಲಿ ಪಾಲ್ಗೊಳ್ಳುವರು~ ಎಂದರು.

ಶಿಬಿರ ಸಂಘಟಕ ಗಣೇಶ್‌ ಕುಡ್ವ ಮಾತನಾಡಿ, `ಕಳೆದ 10 ದಿನಗಳಲ್ಲಿ ಭಾರತ್‌ ಸೌಟ್ಸ್‌ ಮತ್ತು ಗೈಡ್ಸ್‌ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಗರದ 1500 ಮನೆಗಳಿಗೆ ಭೇಟಿ ನೀಡಿ ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡುವುದರ ಜತೆಗೆ ಜಾಗೃತಿ ಮೂಡಿಸಲಾಗಿದೆ~ ಎಂದರು.

ಭಾರತ್‌ ಸೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಆಯುಕ್ತ ಐ. ಎ. ಕೈರಣ್ಣ, ಉಪಾಧ್ಯಕ್ಷ ಕುಡ್ಪಿ ಜಗದೀಶ ಶೆಣೈ, ಕೆ.ಎಂ.ಸಿ. ಬ್ಲಡ್‌ಬ್ಯಾಂಕ್‌ನ ಡಾ. ಪೂರ್ಣಿಮಾ ರಾವ್‌ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.