ADVERTISEMENT

ಕಾಂಗ್ರೆಸ್‌ ಮೃದುಧೋರಣೆಯೇ ಕಾರಣ: ಕ್ಯಾ. ಕಾರ್ಣಿಕ್‌

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 7:39 IST
Last Updated 4 ಜನವರಿ 2018, 7:39 IST

ಮಂಗಳೂರು: ರಾಜ್ಯದಲ್ಲಿ ಹಿಂದೂ ಯುವಕರ ಹತ್ಯೆಗಳು ನಡೆದರೂ, ಸರ್ಕಾರ ಹಂತಕರ ವಿರುದ್ಧ ಕಠಿಣ ಕ್ರಮ ಜರುಗಿಸದೇ ಅಲ್ಪಸಂಖ್ಯಾತ ಕೋಮಿನವರು ಎನ್ನುವ ಕಾರಣಕ್ಕೆ ಮೃದು ಧೋರಣೆ ತೆಳೆಯುವ ಮೂಲಕ ಇನ್ನಷ್ಟು ಅಪರಾಧ ಕೃತ್ಯಗಳಲ್ಲಿ ತೊಡಗಿ ಕೊಳ್ಳಲು ಸಹಕಾರ ನೀಡುತ್ತಿದೆ ಎಂದು ವಿಧಾನ ಪರಿಷತ್‌ ಪ್ರತಿಪಕ್ಷದ ಮುಖ್ಯ ಸಚೇತಕ ಕ್ಯಾ. ಗಣೇಶ್‌ ಕಾರ್ಣಿಕ್‌ ಆರೋಪಿಸಿದ್ದಾರೆ.

ಈ ಭಾಗದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು, ಅಪರಾಧಿ ಗಳನ್ನು ಪೋಷಿಸುತ್ತಿರುವುದೇ ಇಂ ತಹ ಘಟನೆಗಳು ಮರುಕಳಿಸಲು ಕಾರಣವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಹಿಂದೂ ಕಾರ್ಯಕರ್ತರ ಹತ್ಯೆ ತನಿಖೆ ಪ್ರಕರಣಗಳಿಗೆ ತಿಲಾಂಜಲಿ ನೀಡುತ್ತಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಮುಂದಿನ ಚುನಾ ವಣೆಯಲ್ಲಿ ಸರ್ಕಾರ ಇದಕ್ಕೆ ತಕ್ಕ ಬೆಲೆ ತೆರುವುದು ಖಂಡಿತ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆಗಳ ಬಗ್ಗೆ ಕಾನೂನು ಕ್ರಮ ಜರುಗಿಸುವಾಗ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನು ವಂತೆ ತಾರತಮ್ಯ ನೀತಿಯನ್ನು ಅನುಸ ರಿಸುತ್ತಿರುವ ಸರ್ಕಾರ, ಹಿಂದೂ ಕಾರ್ಯ ಕರ್ತರ ಹತ್ಯೆಯ ವಿಚಾರದಲ್ಲಿ ತನ್ನ ಜಾಣ ಕುರುಡು ಪ್ರದರ್ಶಿಸುತ್ತಿದೆ. ರಾಜ್ಯದ ಕಾಂಗ್ರೆಸ್‌ ಸರ್ಕಾರದಿಂದ ನ್ಯಾಯ ಒದಗಿ ಸುವ ಭರವಸೆ ಇಲ್ಲವಾಗಿದೆ. ಈ ಹತ್ಯೆ ಪ್ರಕರಣಗಳನ್ನು ಎನ್‌ಐಎ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.