ADVERTISEMENT

‘ಷಡ್ಯಂತ್ರಕ್ಕೆ ಬಲಿಯಾಗದಿರಲು ತಿಳಿವಳಿಕೆ’

ಲವ್‌ ಜಿಹಾದ್‌ ವಿರುದ್ಧ ಜನಜಾಗೃತಿ ಅಭಿಯಾನ ಆರಂಭ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 7:41 IST
Last Updated 4 ಜನವರಿ 2018, 7:41 IST

ಮಂಗಳೂರು: ಲವ್‌ ಜಿಹಾದ್ ಕುರಿತು ಅರಿವು ಮೂಡಿಸಲು ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಯುವ ವಿಭಾಗ ಹಾಗೂ ದುರ್ಗಾವಾಹಿನಿ ಸಂಘಟನೆಗಳ ವತಿಯಿಂದ ಬುಧವಾರ ಜಾಗೃತಿ ಅಭಿಯಾನ ಆರಂಭಿಸಲಾಯಿತು.

ನಗರದ ಪಿವಿಎಸ್‌ ವೃತ್ತದ ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತ ನಾಡಿದ ವಿಶ್ವಹಿಂದೂ ಪರಿಷತ್‌ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್‌, ಲವ್‌ ಜಿಹಾದ್‌ ವ್ಯವಸ್ಥಿತ ಷಡ್ಯಂತ್ರವಾಗಿದ್ದು, ಇದರ ವಿರುದ್ಧ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರೀತಿ– ಪ್ರೇಮ, ಮೋಸ, ಆಮಿಷ ಗಳ ಬಲೆಗೆ ಸಿಲುಕಿ ಹಲವಾರು ಹಿಂದೂ ಹೆಣ್ಣುಮಕ್ಕಳು ಇಸ್ಲಾಂಗೆ ಮತಾಂತರ ಆಗುತ್ತಿದ್ದು, ಇದು ಹಿಂದೂ ಸಮಾಜದ ಆತಂಕಕ್ಕೆ ಕಾರಣ ವಾಗಿದೆ. ಧರ್ಮಾಂಧತೆಯನ್ನು ತಲೆಗೆ ತುಂಬಿಕೊಂಡು ಹಿಂದೂ ಧರ್ಮ ವನ್ನು ನಾಶ ಮಾಡುವ ವ್ಯವಸ್ಥಿತ ಹುನ್ನಾರ ಇದಾಗಿದೆ. ಲವ್ ಜಿಹಾದ್‌ ಭಯೋತ್ಪಾದನೆಯ ಇನ್ನೊಂದು ಮುಖ. ಈ ಮಹಾಮಾರಿಯ ವಿರುದ್ಧ ಹಿಂದೂ ಸಮಾಜದಲ್ಲಿ ಅರಿವು ಮೂಡಿ ಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ನಗರದ ಎಲ್ಲ ಕಾಲೇಜು ವಿದ್ಯಾರ್ಥಿ ಗಳಿಗೆ ಮತ್ತು ಉದ್ಯೋಗದಲ್ಲಿ ಇರುವ ಯುವತಿಯರಿಗೆ ತಿಳಿವಳಿಕೆ ನೀಡಲಾಗು ವುದು. ಮನೆ ಮನೆಗೆ ತೆರಳಿ, ಕರ ಪತ್ರ ಹಂಚುವ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದರು.

ಕರಾವಳಿಯ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮಗಳಲ್ಲಿ ಜಾತಿ ಸಂಘಟನೆ, ಹಿಂದೂ ಸಂಘಟನೆ ಮತ್ತು ಸಂಘ–ಸಂಸ್ಥೆಗಳ ಪ್ರಮುಖರು, ಗಣ್ಯರನ್ನು ಒಳಗೊಂಡ ಗ್ರಾಮ ಸಮಿತಿಯನ್ನು ರಚಿಸಲಾಗುವುದು. ಲವ್‌ ಜಿಹಾದ್‌ ವಿರುದ್ಧ ಈ ಸಮಿತಿ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಕಳೆದ ಹಲವಾರು ವರ್ಷಗಳಿಂದ ರಾಜ್ಯದಲ್ಲಿ ಲವ್‌ ಜಿಹಾದ್‌ ಪ್ರಕರ ಣದಿಂದ ಸಮಾಜದ ಸ್ವಾಸ್ಥ್ಯ ಹಾಳಾ ಗುತ್ತಿದ್ದು, ಅಶಾಂತಿಗೆ ಕಾರಣವಾಗಿದೆ. ಈ ಮೋಸಕ್ಕೆ ಬಲಿಯಾದ ಹೆಣ್ಣುಮಕ್ಕಳು ಕಣ್ಣೀರಿಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪೊಲೀಸ್‌ ಇಲಾಖೆ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು. ಈ ಕೃತ್ಯ ಎಸಗುತ್ತಿರುವ ಮುಸ್ಲಿಂ ಜಿಹಾದಿ ಮಾನಸಿಕತೆಯ ಯುವಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್‌ ಶೇಣವ, ಬಜರಂಗದಳದ ಪ್ರಾಂತ ಸಂಚಾಲಕ ಶರಣ್‌ ಪಂಪ್‌ವೆಲ್‌, ಗೋಪಾಲ್‌ ಕುತ್ತಾರ್, ದುರ್ಗಾವಾಹಿನಿ ಸಂಚಾಲಕಿ ಸುರೇಖಾ ರಾವ್ ಇದ್ದರು.

ನಂತರ ಅಂಗಡಿ, ಮನೆಗಳು, ಅಟೋ ರಿಕ್ಷಾ, ಬಸ್‌ಗಳಲ್ಲಿ ಕರ ಪತ್ರಗಳನ್ನು ಹಂಚಿ, ಜಾಗೃತಿ ಮೂಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.