ADVERTISEMENT

ಮಾದಕ ದ್ರವ್ಯ ಸೇವನೆ, ಮಾರಾಟ: ಐದೇ ದಿನಗಳಲ್ಲಿ 72 ಪ್ರಕರಣ ದಾಖಲು; 10 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:29 IST
Last Updated 8 ಫೆಬ್ರುವರಿ 2021, 15:29 IST
ಎನ್‌. ಶಶಿಕುಮಾರ್
ಎನ್‌. ಶಶಿಕುಮಾರ್   

ಮಂಗಳೂರು: ಮಂಗಳೂರು ನಗರದ ಪೊಲೀಸ್ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಐದು ದಿನಗಳಲ್ಲಿ ಮಾದಕ ದ್ರವ್ಯ ಸಾಗಾಟ ಹಾಗೂ ಸೇವನೆ 72 ಪ್ರಕರಣಗಳು ದಾಖಲಾಗಿವೆ.

ಒಟ್ಟು ಪ್ರಕರಣಗಳ ಪೈಕಿ ಮಾದಕ ದ್ರವ್ಯ ಸಾಗಾಟ ಆರೋಪದಲ್ಲಿ 10 ಪ್ರಕರಣಗಳು ದಾಖಲಾಗಿವೆ. ಮಾದಕ ದ್ರವ್ಯ ಸೇವನೆ ಆರೋಪದಲ್ಲಿ 62 ಪ್ರಕರಣಗಳಿವೆ.

ಉಳ್ಳಾಲ ಠಾಣೆಯಲ್ಲಿ ಅತಿಹೆಚ್ಚು (9) ಪ್ರಕರಣಗಳು ದಾಖಲಾಗಿವೆ. ಪಣಂಬೂರು ಠಾಣೆಯಲ್ಲಿ ಎಂಟು, ಸುರತ್ಕಲ್ ಹಾಗೂ ಕಂಕನಾಡಿ ಠಾಣೆಗಳಲ್ಲಿ ತಲಾ ಏಳು, ಮಂಗಳೂರು ಉತ್ತರ (ಬಂದರು), ಪೂರ್ವ (ಕದ್ರಿ) ಠಾಣೆಗಳಲ್ಲಿ ತಲಾ ಆರು, ಮಂಗಳೂರು ಗ್ರಾಮಾಂತರ, ಮೂಡುಬಿದಿರೆಯಲ್ಲಿ ತಲಾ ಐದು, ಮಂಗಳೂರು ದಕ್ಷಿಣ (ಪಾಂಡೇಶ್ವರ), ಮೂಲ್ಕಿಯಲ್ಲಿ ತಲಾ ನಾಲ್ಕು, ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ಸ್, ಉರ್ವ ಠಾಣೆಯಲ್ಲಿ ಮೂರು, ಬರ್ಕೆ ಎರಡು, ಕೊಣಾಜೆ, ಕಾವೂರು, ಬಜ್ಪೆ ಠಾಣೆಯಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.

ADVERTISEMENT

ಒಟ್ಟು ಪ್ರಕರಣಗಳಲ್ಲಿ 3 ಕೆ.ಜಿ. 688 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದು, 2.15 ಗ್ರಾಂನ ಎಂಡಿಎಂಎ ಸ್ವಾಧೀನಪಡಿಸಿಕೊಳ್ಳಲಾಗಿದೆ. ಮಾದಕ ದ್ರವ್ಯ ನಿರ್ಮೂಲನೆ ಮಾಡಲು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.