ADVERTISEMENT

ಮಸ್ಕತ್‌ ವಿಮಾನಕ್ಕೆ ಅನುಮತಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 16:37 IST
Last Updated 26 ಜೂನ್ 2020, 16:37 IST
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ   

ಮಂಗಳೂರು: ಎರಡು ದಿನಗಳ ಹಿಂದೆ ಮಸ್ಕತ್‌ನ ಕನ್ನಡಿಗರನ್ನು ಮಂಗಳೂರಿಗೆ ವಿಶೇಷ ಬಾಡಿಗೆ ವಿಮಾನದಲ್ಲಿ ಕಳುಹಿಸಲು ನಡೆಸಿದ್ದ ಪ್ರಯತ್ನ ವಿಫಲವಾಗಿದ್ದು, ಇದರಿಂದ ಅತಂಕಕ್ಕೆ ಒಳಗಾಗಿದ್ದ ಜನರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರು ಧೈರ್ಯ ತುಂಬಿದ್ದಾರೆ.

ವಿಧಾನ ಪರಿಷತ್‌ ಮಾಜಿ ಸದಸ್ಯ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರ ಮೂಲಕ ಸದಾನಂದಗೌಡರನ್ನು ಸಂಪರ್ಕಿಸಿದ್ದು, ಅವರು ಕಾಳಜಿಯಿಂದ ಸ್ಪಂದಿಸಿ, ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಹಾಗೂ ಕರ್ನಾಟಕ ಸರ್ಕಾರದ ಅಧಿಕಾರಿಗಳ ಜತೆ ಮಾತನಾಡಿ ಮಂಗಳೂರಿಗೆ ವಿಶೇಷ ಬಾಡಿಗೆ ವಿಮಾನ ಕರೆತರಲು ಅನುಮತಿ ಕೊಡಿಸಿದ್ದಾರೆ ಎಂದು ಮಸ್ಕತ್‌ನ ಇಂಡಿಯನ್ ಸೋಶಿಯಲ್ ಕ್ಲಬ್ ಹಾಗೂ ಕನ್ನಡ ಸಂಘಗಳ ಒಕ್ಕೂಟದ ಸತೀಶ್ ನಂಬಿಯಾರ್ ಮತ್ತು ಶಶಿಧರ ಶೆಟ್ಟಿ ತಿಳಿಸಿದ್ದಾರೆ.

ಅತಂಕದಲಿದ್ದ ಮಸ್ಕತ್ ಕನ್ನಡಿಗರಿಗೆ ಧೈರ್ಯ ತುಂಬಿ ನೆರವಾದ ಕ್ಯಾ.ಗಣೇಶ್ ಕಾರ್ಣಿಕ್, ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡ, ಜೈ ಶಂಕರ್ ಹಾಗೂ ಕರ್ನಾಟಕ ಸರ್ಕಾರದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.