ADVERTISEMENT

ಮೂವರಿಗೆ ಭಂಡಸಾಲೆ ರತ್ನ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 15:59 IST
Last Updated 30 ಮಾರ್ಚ್ 2022, 15:59 IST
ನಗ್ರಿ ಮಹಾಬಲ ರೈ
ನಗ್ರಿ ಮಹಾಬಲ ರೈ   

ಮಂಗಳೂರು: ಹರೇಕಳ ಗ್ರಾಮದ ಸಂಪಿಗೆದಡಿ ಆಂಬ್ಲಮೊಗರು ಅರ್ಧನಾರೀಶ್ವರ ದೇವಸ್ಥಾನದ ಪ್ರತಿಷ್ಠೆ, ಅಷ್ಟಬಂಧ ಲೇಪನ, ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮದ ಭಾಗವಾಗಿ ಏ.1ರಂದು ಕೇಸರಿ ಎಸ್.ಶೆಟ್ಟಿ ದೋಣಿಂಜೆಗುತ್ತು ಮತ್ತು ಬಿ.ಸಂಕಪ್ಪ ಶೆಟ್ಟಿ ಭಂಡಾರಪಾದೆ ಮತ್ತು ಮಕ್ಕಳಿಂದ ಕಟೀಲು ಮೇಳದ ಬಯಲಾಟ ಸೇವೆ ಜರುಗಲಿದೆ ಎಂದು ಮಾರ್ಗದರ್ಶಕ ನವನೀತ್ ಶೆಟ್ಟಿ ಕದ್ರಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ರಾತ್ರಿ 8.30ಕ್ಕೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ವೇಷಧಾರಿ ನಗ್ರಿ ಮಹಾಬಲ ರೈ, ಪುಂಡುವೇಷಧಾರಿ ಮಾಡಾವು ಕೊರಗಪ್ಪ ರೈ ಮತ್ತು ಅರ್ಥಧಾರಿ ಕನ್ನಡಿಕಟ್ಟೆ ಗಣೇಶ್ ಶೆಟ್ಟಿ ಅವರಿಗೆ ಪ್ರಥಮ ವರ್ಷದ ‘ಭಂಡಸಾಲೆ ರತ್ನ ಪ್ರಶಸ್ತಿ-2022’ ನೀಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ‘ಶ್ರೀ ದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಜರುಗಲಿದೆ ಎಂದರು. ಸಂಘಟಕರಾದ ಭಂಡಾರಪಾದೆ ಮಹೇಶ್ ಶೆಟ್ಟಿ, ಭಂಡಾರಪಾದೆ ಮಧುಸೂದನ್ ಶೆಟ್ಟಿ, ಪ್ರದೀಪ್ ಆಳ್ವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT