ಸಾವು
ಪ್ರಾತಿನಿಧಿಕ ಚಿತ್ರ
ಬೆಳ್ತಂಗಡಿ: ಅಳದಂಗಡಿಯ ಫಲ್ಗುಣಿ ನದಿಯಲ್ಲಿ ಯುವಕನ ಶವವೊಂದು ಸೋಮವಾರ ಪತ್ತೆಯಾಗಿದೆ.
ದೇವರಗುಡ್ಡೆ ನಿವಾಸಿ ಸುದೀಪ್ (25) ಅವರ ಶವ ಎಂದು ಗುರುತಿಸಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.
ಅಳದಂಗಡಿ ಅರಮನೆ ಹಿಂಬದಿಯಲ್ಲಿ ಫಲ್ಗುಣಿ ನದಿಗೆ ಇರುವ ಕಿಂಡಿ ಅಣೆಕಟ್ಟೆ ಬಳಿ ಸೋಮವಾರ ವ್ಯಕ್ತಿಯೊಬ್ಬರು ಮೀನು ಹಿಡಿಯಲೆಂದು ನದಿ ಬದಿಗೆ ತೆರಳಿದಾಗ ಶವ ಗಮನಕ್ಕೆ ಬಂದಿದೆ. ವೇಣೂರು ಪೊಲೀಸರು ಶವವನ್ನು ಮೇಲೆತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.