ADVERTISEMENT

‘ಯೋಗ ಸತ್ಸಂಗ ಸುಜ್ಞಾನ’ ಬಿಡುಗಡೆ 15ಕ್ಕೆ

​ಪ್ರಜಾವಾಣಿ ವಾರ್ತೆ
Published 11 ಮೇ 2022, 12:27 IST
Last Updated 11 ಮೇ 2022, 12:27 IST

ಮಂಗಳೂರು: ಯೋಗಗುರು ಡಾ.ಎಂ. ಜಗದೀಶ್ ಶೆಟ್ಟಿ ಬಿಜೈ ಹಾಗೂ ವಿವಿಧ ಯೋಗ ಕೇಂದ್ರಗಳ ಶಿಬಿರಾರ್ಥಿಗಳಿಂದ ಆಯೋಜಿಸಿದ್ದ ಯೋಗಗುರುಗಳ 220 ಉಚಿತ ಯೋಗ ಶಿಬಿರ ಹಾಗೂ ಒಡಿಯೂರು ಶ್ರೀಗಳ ಷಷ್ಟ್ಯಬ್ಧ ಅಂಗವಾಗಿ ನಡೆದ 200 ದಿನಗಳ ಉಚಿತ ಆನ್‌ಲೈನ್ ಯೋಗ ಸತ್ಸಂಗ ಶಿಬಿರದಲ್ಲಿ ಸುಜ್ಞಾನ ಬೀರಿದ ತಜ್ಞ- ಪ್ರಾಜ್ಞರ ವಿಚಾರಧಾರೆ ಒಳಗೊಂಡ ‘ಯೋಗ ಸತ್ಸಂಗ ಸುಜ್ಞಾನ’ ಪುಸ್ತಕ ಬಿಡುಗಡೆ ಸಮಾರಂಭ ಮೇ 15ರಂದು ಸಂಜೆ 5.30ಕ್ಕೆ ಕೋಡಿಕಲ್ ಎಸ್‌ಎನ್‌ಡಿಪಿ ಮಂದಿರದಲ್ಲಿ ನಡೆಯಲಿದೆ.

ಶ್ರೀ ಕ್ಷೇತ್ರ ಒಡಿಯೂರಿನ ಗುರುದೇವಾನಂದ ಸ್ವಾಮೀಜಿ ಪುಸ್ತಕ ಬಿಡುಗಡೆ ಮಾಡುವರು. ಶಾಸಕ ಡಾ. ವೈ. ಭರತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಎನ್‌ಎಂಪಿಎ ಉಪಾಧ್ಯಕ್ಷ ಕೆ.ಜಿ. ನಾಥ್, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಪ್ರಮುಖರಾದ ಕಲ್ಲೂರು ನಾಗೇಶ್, ರಾಜೇಶ್ ರಾವ್, ಪುರುಷೋತ್ತಮ ಪೂಜಾರಿ ಕೋಡಿಕಲ್, ವಿದ್ಯಾ ಸಾಗರ್, ಮಹಾನಗರ ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್, ಮನೋಜ್ ಕುಮಾರ್ ಅತಿಥಿಗಳಾಗಿ ಭಾಗವಹಿಸುವರು. ಪುಸ್ತಕದ ಸಂಪಾದಕ ಪಿ.ಸುಧಾಕರ ಕಾಮತ್ ಅವರನ್ನು ಸನ್ಮಾನಿಸಲಾಗುವುದು ಎಂದು ಯೋಗಗುರು ಡಾ. ಎಂ. ಜಗದೀಶ್ ಶೆಟ್ಟಿ ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆನ್‌ಲೈನ್ ಯೋಗ ಶಿಬಿರದಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳ ಭಾಷಣಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುತ್ತಿದೆ. ಸ್ವಾಮೀಜಿಗಳು, ಯೋಗ, ಆರೋಗ್ಯ, ಶಿಕ್ಷಣ, ಆರ್ಥಿಕ ತಜ್ಞರು, ಪ್ರಾಜ್ಞರ ವಿಚಾರಧಾರೆಗಳು ಈ ಪುಸ್ತಕದಲ್ಲಿವೆ ಎಂದರು. ಪುಸ್ತಕ ಸಂಪಾದಕ ಪಿ. ಸುಧಾಕರ ಕಾಮತ್, ಸಂಚಾಲಕಿ ಭಾರತಿ ಶೆಟ್ಟಿ, ಶ್ಯಾಮಲಾ ರಾವ್, ಸುಚಿತ್ರಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.