ADVERTISEMENT

ಓಡಿಲ್ನಾಳ ಕಿರಾತಮೂರ್ತಿ ದೇವಸ್ಥಾನ: ಬ್ರಹ್ಮಕಲಶ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:14 IST
Last Updated 15 ನವೆಂಬರ್ 2022, 5:14 IST
ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಓಡಿಲ್ನಾಳ ಕಿರಾತಮೂರ್ತಿ ದೇವಸ್ಥಾನದ  ಬ್ರಹ್ಮಕಲಶ ಸಮಿತಿ ರಚನೆ ಹಾಗೂ ಸಮಾಲೋಚನಾ ಸಭೆ ನಡೆಯಿತು
ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಓಡಿಲ್ನಾಳ ಕಿರಾತಮೂರ್ತಿ ದೇವಸ್ಥಾನದ  ಬ್ರಹ್ಮಕಲಶ ಸಮಿತಿ ರಚನೆ ಹಾಗೂ ಸಮಾಲೋಚನಾ ಸಭೆ ನಡೆಯಿತು   

ಬೆಳ್ತಂಗಡಿ: ತಾಲ್ಲೂಕಿನ ಓಡಿಲ್ನಾಳ ಗ್ರಾಮದ ಮೈರಲ್ಕೆ ಕಿರಾತಮೂರ್ತಿ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪದಾಧಿಕಾರಿಗಳು ಹಾಗೂ ವಿವಿಧ ಸಮಿತಿಗಳ ಸಂಚಾಲಕರ ಆಯ್ಕೆ ಹಾಗೂ ಪೂರ್ವ ತಯಾರಿ ಸಭೆ ಬೆಳ್ತಂಗಡಿ ಶಾಸಕ ಹಾಗೂ ಬ್ರಹ್ಮಕಲಶ ಸಮಿತಿ ಅಧ್ಯಕ್ಷ. ಹರೀಶ್ ಪೂಂಜ ಅಧ್ಯಕ್ಷತೆಯಲ್ಲಿ ನಡೆಯಿತು.

ಹರೀಶ್ ಪೂಂಜ ಮಾತನಾಡಿ, ‘ಕಿರಾತಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳು ಭರದಿಂದ ಸಾಗುತ್ತಿದೆ. ಊರಿನ ಜನರ ಶ್ರಮದಾನದಿಂದ ಸುಂದರವಾದ ದೇವಾಲಯ ನಿರ್ಮಾಣಗೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಬ್ರಹ್ಮಕಲಶ ನಡೆಯಲಿದೆ. ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕು. ಬ್ರಹ್ಮಕಲಶ ಯಶಸ್ವಿಯಾಗುವಂತೆ ದೇವಸ್ಥಾನಕ್ಕೆ ಸಂಬಂಧಪಟ್ಟ ಗ್ರಾಮದ ಪ್ರತಿ ಮನೆಯವರ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಎಲ್ಲರೂ ಒಟ್ಟಾಗಿ ಸೇರಿಕೊಂಡು ದೇವಸ್ಥಾನದ ಬ್ರಹ್ಮಕಲಶೋತ್ಸವ ಯಶಸ್ಸುಗೊಳಿಸೋಣ’ ಎಂದರು.

ಕ್ಷೇತ್ರದ ತಂತ್ರಿ ನಂದ ಕುಮಾರ್ ಉಪಸ್ಥಿತಿಯಲ್ಲಿ, ಸಮಿತಿ ಅಧ್ಯಕ್ಷ ಹರೀಶ್ ಪೂಂಜ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಜಯರಾಮ ಶೆಟ್ಟಿ ಪಡಂಗಡಿ ಹಾಗೂ ಧರ್ಮೋತ್ಥಾನ ಟ್ರಸ್ಟ್ ಅಧ್ಯಕ್ಷ ವೃಷಭ ಆರಿಗ ನೇತೃತ್ವದಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಯಿತು.

ADVERTISEMENT

ಜೀರ್ಣೋದ್ದಾರ ಸಮಿತಿ ಕೋಶಾಧಿಕಾರಿ ಗೋಪಾಲ ಶೆಟ್ಟಿ ಕೋರ್ಯಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ರಾಜ್ ಪ್ರಕಾಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಧರಣೇಂದ್ರ ಕೆ. ಜೈನ್, ಯುವ ಸಮಿತಿ ಅಧ್ಯಕ್ಷ ಚಿದಾನಂದ ಇಡ್ಯ, ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾವತಿ, ಪವಿತ್ರಪಾಣಿ ಮೋಹನ್ ಕೆರ್ಮುಣ್ಣಾಯ ಮೈರಾರು, ಎಸ್ ಗಂಗಾಧರ ರಾವ್ ಕೆವುಡೇಲು, ಕುವೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.