ADVERTISEMENT

ನಿರಪರಾಧಿ ಎಂದು ಸಾಬೀತಾದರೆ ಪರಿಹಾರ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2019, 8:30 IST
Last Updated 26 ಡಿಸೆಂಬರ್ 2019, 8:30 IST
ಸಿ.ಟಿ.ರವಿ
ಸಿ.ಟಿ.ರವಿ   

ಮಂಗಳೂರು: ಗೋಲಿಬಾರ್‌ನಲ್ಲಿ ಮೃತಪಟ್ಟವರು ಅಪರಾಧಿಗಳಾದರೆ ಪರಿಹಾರ ನೀಡಲು ಸಾಧ್ಯವಿಲ್ಲ. ತನಿಖೆ ನಡೆಯುತ್ತಿದೆ. ಮೃತಪಟ್ಟವರು ಅಮಾಯಕರಾದರೆ ಪರಿಹಾರ ನೀಡಲಾಗುವುದು ಎಂದು ಸಚಿವ‌ ಸಿ.ಟಿ. ರವಿ ಹೇಳಿದರು.

ಸಿಎಎ ಹೆಸರಿನಲ್ಲಿ‌ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಆರೋಪಿಸಿದರು.

370 ವಿಧಿ ರದ್ದು, ರಾಮಮಂದಿರ ತೀರ್ಪು ಬಂದಾಗ ಗಲಭೆ ಆಗಲಿದೆ ಎಂದು‌ ಕಾಂಗ್ರೆಸ್‌ನವರು ಅಂದುಕೊಂಡಿದ್ದರು. ಆದರೆ, ಏನೂ ಆಗಲಿಲ್ಲ. ಸಿಎಎ‌ ಅನುಷ್ಠಾನಕ್ಕೆ ಸಿದ್ಧತೆ ನಡೆಯುತ್ತಿದ್ದಂತೆಯೇ‌ ಕಾಂಗ್ರೆಸ್ ಗಲಭೆಗೆ ಸಂಚು ರೂಪಿಸಿತ್ತು ಎಂದು ದೂರಿದರು.

ADVERTISEMENT

ಶಾಸಕ ಯು.ಟಿ. ಖಾದರ್ ಅವರು ಬೆಂಕಿಯ‌ ಮಾತುಗಳನ್ನು ಆಡಿದ್ದರೂ ಕಾಂಗ್ರೆಸ್ ಮೌನ‌ವಹಿಸಿರುವುದು ಏಕೆ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.