ADVERTISEMENT

‘ಸೊಕ್ಕು ಮುರಿಯಲು ಕರಾವಳಿಗೆ ಪ್ರವಾಸ ನಿಲ್ಲಿಸಬೇಕು’

​ಪ್ರಜಾವಾಣಿ ವಾರ್ತೆ
Published 28 ಜೂನ್ 2021, 21:42 IST
Last Updated 28 ಜೂನ್ 2021, 21:42 IST

ಮಂಗಳೂರು: ‘ಕರಾವಳಿಗೆ ಪ್ರವಾಸ ಹೋಗುವುದನ್ನು ನಿಲ್ಲಿಸುವ ತನಕ ಮಂಗಳೂರಿನ ಜನರ ಸೊಕ್ಕು ಮುರಿಯೋದಿಲ್ಲ’ ಎಂಬ ಕ್ಲಬ್ ಹೌಸ್ ಆಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕರುನಾಡು ವರ್ಸಸ್ ತುಳುನಾಡು ಕ್ಲಬ್‌ ಹೌಸ್‌ನಲ್ಲಿ ನಡೆದಿರುವ ಚರ್ಚೆಯಲ್ಲಿ, ‘ಕರಾವಳಿಗೆ ಟ್ರಿಪ್ ಹೋಗೋದನ್ನು ನಿಲ್ಲಿಸಬೇಕು. ನಮ್ಮಲ್ಲಿ ದೇವಸ್ಥಾನಗಳಿಲ್ವ, ಮನೆ ದೇವರು ಇಲ್ವ? ಇದನ್ನು ಬಿಟ್ಟು ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುತ್ತಿದ್ದೇವೆ. ಅದನ್ನು ನಾವು ಕಡಿಮೆ ಮಾಡಬೇಕು’ ಎಂದು ಸದಸ್ಯರು ಹೇಳಿದ್ದಾರೆ.

‘ಕನ್ನಡ ವಾಹಿನಿಗಳಲ್ಲಿ ಕರಾವಳಿಯ ಕೆಲವರು ಮೆರಿತಾ ಇದ್ದಾರೆ. ಅವರನ್ನು ಪ್ರೊಮೋಟ್ ಮಾಡೋದನ್ನು ಕಡಿಮೆ ಮಾಡಬೇಕು’ ಎಂದಿರುವ ಕರುನಾಡು ಕ್ಲಬ್ ಹೌಸ್ ಗ್ರೂಪ್, ‘ಅನುಶ್ರೀ ಎಂಟ್ರಿ ಆದ ಬಳಿಕ ತುಳುನಾಡಿನವರನ್ನು ತುಂಬುತ್ತಿದ್ದಾರೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.