ADVERTISEMENT

ನಂತೂರು: ಕಟ್ಟಡದಿಂದ ಬಿದ್ದು ಟೆಕ್ನಿಷಿಯನ್‌ ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:44 IST
Last Updated 30 ಮಾರ್ಚ್ 2023, 5:44 IST

ಮಂಗಳೂರು: ನಗರದ ನಂತೂರಿನ ‘ಮೌಂಟ್ ಟೀಯರಾ‘ ಅಪಾರ್ಟ್‌ಮೆಂಟ್‌ ಸಮುಚ್ಚಯ ಕಟ್ಟಡದ ಒಂಬತ್ತನೇ ಮಹಡಿಯಿಂದ ಕೆಳಗೆ ಬಿದ್ದು ಎ.ಸಿ. ಟೆಕ್ನಿಷಿಯನ್‌ ಒಬ್ಬರು ಬುಧವಾರ ಸಂಜೆ ಮೃತಪಟ್ಟಿದ್ದಾರೆ.

‘ಬಂಟ್ವಾಳ ತಾಲ್ಲೂಕಿನ ವಿನಯ್‌ ಜೋಯಲ್‌ ತಾವ್ರೊ (22 ವರ್ಷ) ಮೃತರು. ಅವರು ಒಂಬತ್ತನೇ ಮಹಡಿಯ ಕಿಟಕಿಯಿಂದ ಹೊರಬಂದು ಹವಾನಿಯಂತ್ರಕ ಯಂತ್ರಕ್ಕೆ ಸ್ಕ್ರೂ ಅಳವಡಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಈ ಸಂಬಂಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.