ADVERTISEMENT

ಮಂಗಳೂರು| ಶುಕ್ರವಾರದ ನಮಾಜ್‌ಗಾಗಿ ಕರ್ಫ್ಯೂ ಸಡಿಲಿಕೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2019, 6:35 IST
Last Updated 20 ಡಿಸೆಂಬರ್ 2019, 6:35 IST
ನಮಾಜ್‌ (ಸಾಂದರ್ಭಿಕ ಚಿತ್ರ)
ನಮಾಜ್‌ (ಸಾಂದರ್ಭಿಕ ಚಿತ್ರ)   

ಮಂಗಳೂರು: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೇರಲಾಗಿದ್ದ ಕರ್ಫ್ಯೂವನ್ನು ಶುಕ್ರವಾರದ ನಮಾಜ್‌ಗಾಗಿ ಕೆಲ ಸಮಯ ತೆರವುಗೊಳಿಸಲಾಗಿದೆ.

ನಿಷೇಧಾಜ್ಞೆಯನ್ನು ಧಿಕ್ಕರಿಸಿ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಇಲ್ಲಿನ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಬಲಿಯಾದ ನಂತರ ಕರ್ಫ್ಯೂ ಹೇರಲಾಗಿತ್ತು. ಈ ಕಾರಣ ಜಿಲ್ಲೆ ಸಂಪೂರ್ಣವಾಗಿ ಬಂದ್‌ ಆಗಿದೆ.

‘ಪ್ರತಿ ಶುಕ್ರವಾರ ನಡೆಸುವ ಜುಮಾ ನಮಾಜ್‌ಗಾಗಿಮಧ್ಯಾಹ್ನ 12ರಿಂದ 2 ರವರೆಗೆ ಎರಡು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲು ಮನವಿ ಮಾಡಿದ್ದೇವೆ ಅದರಂತೆ, ಪೊಲೀಸರು ಸಡಿಲಿಸಿದ್ದಾರೆ’ ಎಂದು ಶಾಸಕ ಯು.ಟಿ.ಖಾದರ್‌ ತಿಳಿಸಿದರು.

ADVERTISEMENT

ಶವಪರೀಕ್ಷೆ ಆರಂಭ

ವೆನ್‌ಲಾಕ್ ಆಸ್ಪತ್ರೆಯಲ್ಲಿ ನಿನ್ನೆ ಗೋಲೀಬಾರ್‌ನಲ್ಲಿ ಮೃತಪಟ್ಟವರ ಶವಪರೀಕ್ಷೆ ಆರಂಭವಾಗಿದೆ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಪೊಲೀಸ್ ಕಮಿಷನರ್ ಹರ್ಷ ನೇತೃತ್ವದಲ್ಲಿ ಶವಪರೀಕ್ಷೆ ನಡೆಯುತ್ತಿದೆ.

ಶವಾಗಾರದ ರಸ್ತೆಯನ್ನು ಪೊಲೀಸರು ಸಂಚಾರ ನಿರ್ಬಂಧ ವಿಧಿಸಿದ್ದಾರೆ. ಮಾಜಿ ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಮೊಹಿದ್ದೀನ್ ಸೇರಿ ಹಲವು ನಾಯಕರು ಈಗಾಗಲೇ ಆಸ್ಪತ್ರೆ ಆವರಣಕ್ಕೆ ಬಂದಿದ್ದಾರೆ.

ಮೃತರ ಕುಟುಂಬದವರು ದಕ್ಷಿಣ ಕನ್ನಡ ಸೆಂಟ್ರಲ್ ಮುಸ್ಲಿಂ ಕಮಿಟಿ ನಾಯಕರೊಂದಿಗೆ ಮರಣೋತ್ತರ ಪರೀಕ್ಷೆಗೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.