ADVERTISEMENT

ಮಂಗಳೂರು: ಅಂತರರಾಜ್ಯ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 8:23 IST
Last Updated 19 ನವೆಂಬರ್ 2021, 8:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕೋವಿಡ್ ಇಳಿಮುಖವಾಗಿರುವ ಕಾರಣಕ್ಕೆ ಕೇರಳ- ಕರ್ನಾಟಕ ನಡುವೆ ಬಸ್ ಸಂಚಾರಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿದೆ.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆವಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ.

ಕೋವಿಡ್ ಇಳಿಮುಖವಾಗಿರುವ ಕಾರಣಕ್ಕೆ ಎರಡು ರಾಜ್ಯಗಳ‌‌ ನಡುವಿನ ಸಾರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿವೆ. ಭೌತಿಕ ತರಗತಿಗಳು ಆರಂಭವಾಗಿವೆ. ಕೇರಳ ರಾಜ್ಯದ ಗಡಿ ಪ್ರದೇಶದಿಂದ ವಿದ್ಯಾಭ್ಯಾಸಕ್ಕೆ ಬರುವವರು, ಉದ್ಯೋಗಿಗಳು, ವೈದ್ಯಕೀಯ ಸೇವೆಗೆ ಬರುವವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಲಾಕ್ ಡೌನ್‌ ತೆರವುಗೊಂಡಿದ್ದರೂ, ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಇದ್ದ‌‌ ಕಾರಣಕ್ಕೆ ಸಾರಿಗೆ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಂಗಳೂರಿನಿಂದ ಗಡಿಭಾಗ ತಲಪಾಡಿವರೆಗೆ ಮಾತ್ರ ಬಸ್ ಸಂಚಾರ ಇತ್ತು.

ಶುಕ್ರವಾರ ಮಂಗಳೂರಿನಿಂದ ಕಾಸರಗೋಡಿನವರೆಗೆ ಬಸ್ ಗಳು‌ ಸಂಚರಿಸಿದವು. 'ಶನಿವಾರದಿಂದ‌ ಪೂರ್ಣಪ್ರಮಾಣದಲ್ಲಿ ಬಸ್ ಗಳ ಕಾರ್ಯಾಚರಣೆ ಆರಂಭವಾಗಲಿದೆ' ಎಂದು ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.