ಉಪ್ಪಿನಂಗಡಿ: ‘ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುವ ಚತುಷ್ಪಥ ರಸ್ತೆ ಕಾಮಗಾರಿಯ ಬದಿಯಲ್ಲಿ ರಾಘವೇಂದ್ರ ನಾಯಕ್ ಎಂಬುವರು ಅಕ್ರಮವಾಗಿ ನಿರ್ಮಿಸಿರುವ ಶೆಡ್ ತೆರವು ಮಾಡಬೇಕು’ಎಂದು ಅಜರುದ್ದೀನ್ ಎಂಬುವರು ಉಪ್ಪಿನಂಗಡಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದಾರೆ.
‘ಕುಮಾರಧಾರಾ ಸೇತುವೆ ಬಳಿಯಲ್ಲಿ ತಗಡು ಶೀಟ್ ಹಾಕಿ ಶೆಡ್ ನಿರ್ಮಿಸಲಾಗಿದೆ. ಈ ಜಾಗವು ಹೆದ್ದಾರಿ ವ್ಯಾಪ್ತಿಯಲ್ಲೇ ಇದೆ. ಹೆದ್ದಾರಿ ವ್ಯಾಪ್ತಿಯ ಬದಿಯಲ್ಲಿ ಕಟ್ಟಡಗಳಿಗೆ ಅನುಮತಿ ನೀಡಬಾರದು ಎಂಬ ನಿಯಮ ಇದ್ದರೂ ಅದನ್ನು ಉಲ್ಲಂಘಿಸಲಾಗಿದೆ. ಈ ಕಟ್ಟಡಕ್ಕೆ ಪರವಾನಗಿ ಕೋರಿ ಪಂಚಾಯಿತಿ ಕಚೇರಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಆ ಅರ್ಜಿಯನ್ನು ಮಾನ್ಯ ಮಾಡಬಾರದು’ ಎಂದು ಅವರು ತಿಳಿಸಿದ್ದಾರೆ.
‘ರಾಘವೇಂದ್ರ ನಾಯಕ್ ಎಂಬುವರು ಪರವಾನಗಿ ಕೋರಿ ಅರ್ಜಿ ಸಲ್ಲಿಸಿದ್ದು, ಷೆಡ್ ಜಾಗ ಪಟ್ಟಾ ಜಾಗದಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ, ಇದು ಹೆದ್ದಾರಿಯಿಂದ 15 ಮೀಟರ್ ಅಂತರದಲ್ಲಿದ್ದು, ಅರ್ಜಿ ತಿರಸ್ಕರಿಸಲಾಗಿದೆ’ ಎಂದು ಉಪ್ಪಿನಂಗಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.