ADVERTISEMENT

ಧರ್ಮಸ್ಥಳದಲ್ಲಿ ಯಂತ್ರಶ್ರೀ ನಾಟಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಚಾಲನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 3:47 IST
Last Updated 24 ಜೂನ್ 2022, 3:47 IST
ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಯಂತ್ರಶ್ರೀ ನಾಟಿಗೆ ಚಾಲನೆ ನೀಡಿದರು
ಧರ್ಮಸ್ಥಳದಲ್ಲಿ ಬುಧವಾರ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಯಂತ್ರಶ್ರೀ ನಾಟಿಗೆ ಚಾಲನೆ ನೀಡಿದರು   

ಉಜಿರೆ: ಕೃಷಿ ಯಂತ್ರ ಬಾಡಿಗೆಯಾಧಾರಿತ ಸೇವಾ ಕೇಂದ್ರದ ಆಶ್ರಯದಲ್ಲಿ ಧರ್ಮಸ್ಥಳದ ಗದ್ದೆಯಲ್ಲಿ ಬುಧವಾರ ಯಂತ್ರದ ಮೂಲಕ ನಾಟಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಚಾಲನೆ ನೀಡಿದರು.

‘ನಾಟಿಯಲ್ಲಿ ಯಂತ್ರಗಳ ಬಳಕೆಯಿಂದ ಕಡಿಮೆ ಸಮಯ ಮತ್ತು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಕೂಲಿ ಕಾರ್ಮಿಕರ ಸಮಸ್ಯೆಯೂ ನಿವಾರಣೆಯಾಗುತ್ತದೆ. ರಾಜ್ಯದಲ್ಲಿ 164 ಕೇಂದ್ರಗಳಲ್ಲಿ ರೈತರಿಗೆ ಯಂತ್ರಗಳ ಸೇವೆಯನ್ನು ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಧರ್ಮಸ್ಥಳ ಗ್ರಾಮಾಬಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೆಜಸ್, ವಲಯ ನಿರ್ದೇಶಕ ದಿನೇಶ್, ಆಡಳಿತ ಯೋಜನಾಧಿಕಾರಿ ಹರೀಶ್, ಮತ್ತು ಸುದೀಪ್, ಕೃಷಿ ಮೇಲ್ವಿಚಾರಕ ರಾಜೇಂದ್ರ ರೈ ಮತ್ತು ಹರಿಪ್ರಸಾದ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.