ಪುತ್ತೂರು: ಹಿರಿಯರು ನೀಡುವ ಮಾರ್ಗದರ್ಶನ ಪಡೆದುಕೊಂಡು ಸಂಸ್ಕಾರಯುತವಾಗಿ ಮುನ್ನಡೆದರೆ ಜೀವನ ಉತ್ತಮಗೊಳ್ಳುತ್ತದೆ ಎಂದು ಶಾಲಾ ಆಡಳಿತ ಮಂಡಳಿ ಸದಸ್ಯೆ ವೀಣಾ ನಾಗೇಶ್ ತಂತ್ರಿ ಹೇಳಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಸಂಚಾಲಕ ವಸಂತ ಸುವರ್ಣ, ಹಿರಿಯ ವಿದ್ಯಾರ್ಥಿ ಅಭಿಜ್ಞಾನ್ ಅವರು ಮಾತನಾಡಿದರು.
ಅನ್ನಪೂರ್ಣಾ ಸಮಿತಿ ಸದಸ್ಯೆ ಶ್ಯಾಮಲಾ ನಾಯಕ್ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಶಾಲಾ ಹಿರಿಯ ಶಿಕ್ಷಕಿ ದಾಕ್ಷಾಯಿಣಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಪೂಜಾ ನಿರೂಪಿಸಿದರು. ವಿದ್ಯಾರ್ಥಿ ಶೃಜನ್ ರೈ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.