ADVERTISEMENT

ಮಹಿಳೆಯರಿಗೆ ಎಲೆಕ್ಟ್ರಿಕ್ ರಿಕ್ಷಾ: ಶಾಸಕ ಪೂಂಜ

ಪೊಯ್ಯಗುಡ್ಡೆ: ನೂತನ ರಿಕ್ಷಾ ನಿಲ್ದಾಣದ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2022, 2:30 IST
Last Updated 23 ಜೂನ್ 2022, 2:30 IST
ಪೊಯ್ಯಗುಡ್ಡೆಯಲ್ಲಿ ರಿಕ್ಷಾ ನಿಲ್ದಾಣ ಉದ್ಘಾಟಿಸಿ ಶಾಸಕ ಹರೀಶ್ ಪೂಂಜ ಮಾತನಾಡಿದರು
ಪೊಯ್ಯಗುಡ್ಡೆಯಲ್ಲಿ ರಿಕ್ಷಾ ನಿಲ್ದಾಣ ಉದ್ಘಾಟಿಸಿ ಶಾಸಕ ಹರೀಶ್ ಪೂಂಜ ಮಾತನಾಡಿದರು   

ಬೆಳ್ತಂಗಡಿ : ‘ಮಹಿಳೆಯರು ರಿಕ್ಷಾ ಚಾಲಕರಾಗಿ ದುಡಿಯಲು ಬಯಸಿದರೆ ನೇತ್ರಾವತಿ ಸಂಜೀವಿನಿ ಒಕ್ಕೂಟದ ಮೂಲಕ ಎಲೆಕ್ಟ್ರಿಕ್ ರಿಕ್ಷಾವನ್ನು ಒದಗಿಸುವ ಕೆಲಸ ಮಾಡುತ್ತೇನೆ’ ಎಂದು ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.

ಸಾರಿಗೆ ಇಲಾಖೆಯ ಆಟೊ ರಿಕ್ಷಾ ಚಾಲಕರ ಕಲ್ಯಾಣ ಯೋಜನೆಯಡಿ ₹5 ಲಕ್ಷ ವೆಚ್ಚದಲ್ಲಿ ಪಡಂಗಡಿಯ ಪೊಯ್ಯಗುಡ್ಡೆಯಲ್ಲಿ ನಿರ್ಮಿಸಲಾದ ಆಟೊ ರಿಕ್ಷಾ ನಿಲ್ದಾಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾರಿಗೆ ಇಲಾಖೆಯ ಆಟೊ ರಿಕ್ಷಾ ಚಾಲಕರ ಕಲ್ಯಾಣ ಯೋಜನೆಯಡಿ ₹1 ಕೋಟಿಯ ಪ್ರಪ್ರಥಮ ಅನುದಾನ ನಮ್ಮ ಕ್ಷೇತ್ರಕ್ಕೆ ಲಭಿಸಿದೆ. ಇನ್ನು ₹1 ಕೋಟಿ ಅನುದಾನ ಮುಂದಿನ 2 ತಿಂಗಳೊಳಗೆ ಬಿಡುಗಡೆಯಾಗಲಿದ್ದು, ತಾಲ್ಲೂಕಿನಲ್ಲಿ ಒಟ್ಟು 50 ರಿಕ್ಷಾ ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸಲಾಗುವುದು’ ಎಂದರು.

ADVERTISEMENT

‘2030ರ ವೇಳೆಗೆ ಡೀಸೆಲ್‌ ಮುಕ್ತ ದೇಶವನ್ನಾಗಿ ಮಾಡುವ ಚಿಂತನೆ ಪ್ರಧಾನಿ ನರೇಂದ್ರ ಮೋದಿಯವರದ್ದು’ ಎಂದರು.

ಪಡಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕವಿತಾ ಮೋನಿಸ್, ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಂತೋನಿ ಫ‌ರ್ನಾಂಡಿಸ್, ಉಪಾಧ್ಯಕ್ಷ ನರೇಂದ್ರ ಕುಮಾರ್, ಪಂಚಾಯಿತಿ ಕಾರ್ಯದರ್ಶಿ ತಾರಾನಾಥ, ಪಡಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮ್ಯಾಕ್ಸಿಂ ಸಿಕ್ವೆರ, ಪ್ರಮುಖರಾದ ವಿಶ್ವನಾಥ ಹೊಳ್ಳ, ಅಶೋಕ್ ಗೋವಿಯಸ್, ಶಿವಪ್ಪ ಕುಲಾಲ್ ಇದ್ದರು.

ರಿಕ್ಷಾ ಚಾಲಕ- ಮಾಲೀಕರ ಸಂಘದ ವತಿಯಿಂದ ಶಾಸಕರನ್ನು ಸಮ್ಮಾನಿಸಲಾಯಿತು.

ಸಂತೋಷ್ ಕುಮಾರ್ ಜೈನ್ ಪ್ರಸ್ತಾವಿಸಿ, ಅಹ್ಮದ್ ಬಾವ ಸ್ವಾಗತಿಸಿ, ಶಿವಾನಂದ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.