ADVERTISEMENT

ಫಾದರ್ ಮುಲ್ಲರ್‌ನಲ್ಲಿ ಎಂಐಸಿಯು ಘಟಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2022, 16:30 IST
Last Updated 12 ಮಾರ್ಚ್ 2022, 16:30 IST

ಮಂಗಳೂರು: ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳು ಪ್ರತಿ ವರ್ಷ ಸಂಸ್ಥಾಪಕರ ದಿನವಾಗಿ ಫಾದರ್ ಅಗಸ್ಟಸ್ ಮುಲ್ಲರ್ ಎಸ್.ಜೆ ಅವರ 181ನೇ ಜನ್ಮ ವಾರ್ಷಿಕೋತ್ಸವವನ್ನು ಶನಿವಾರ ಆಚರಿಸಲಾಯಿತು.

ಆಮ್ಲಜನಕ ಘಟಕ ಮತ್ತು ಮ್ಯಾನಿಫೋಲ್ಡ್‌ ಘಟಕ ಮತ್ತು ಹೆಚ್ಚುವರಿ 20 ಹಾಸಿಗೆಗಳ ಎಂಐಸಿಯು ಘಟಕಗಳನ್ನು ಉದ್ಘಾಟಿಸಲಾಯಿತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 20 ಹಾಸಿಗೆಗಳ ವೈದ್ಯಕೀಯ ತೀವ್ರ ನಿಗಾ ಘಟಕದ ಜತೆಗೆ ಇನ್ನು 20 ಹಾಸಿಗೆಗಳನ್ನು ಹೆಚ್ಚಿಸಲಾಗಿದೆ. ಆಸ್ಪತ್ರೆ ಬ್ಲಾಕ್‌ 1ನೇ ಮಹಡಿಯಲ್ಲಿರುವ ಹೊಸ ಎಂಐಸಿಯು ಘಟಕವನ್ನು ರೋಗಿ ಮತ್ತು ವೈದ್ಯಕೀಯ ಸ್ನೇಹಿಯಾಗಿ ಮಾಡಲಾಗಿದೆ.
ಮಂಗಳೂರು ಧರ್ಮಪ್ರಾಂತ್ಯದ ಬಿಷಪ್, ಫಾದರ್ ಅಜಿತ್ ಮಿನೆಜಸ್, ಫಾದರ್ ಜಾರ್ಜ್ ಜೀವನ್ ಸಿಕ್ವೇರಾ, ಫಾದರ್ ನೆಲ್ಸನ್ ಧೀರಜ್ ಪೈಸ್ ಇದ್ದರು. ಎಫ್‌ಎಂಸಿಐ ನಿರ್ದೇಶಕ ರಿಚರ್ಡ್ ಅಲೋಶಿಯಸ್ ಕೊಯೆಲ್ಹೊ ಸ್ವಾಗತಿಸಿದರು. ಫಾದರ್ ರುಡಾಲ್ಫ್ ರವಿ ಡಿಸಾ ವಂದಿಸಿದರು. ಡಾ. ಕೆಲ್ವಿನ್ ಪೈಸ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT