ADVERTISEMENT

ಉಪ್ಪಿನಂಗಡಿ ಸಹಕಾರ ಸಂಘದಿಂದ ರಕ್ಷಣಾ ನಿಧಿಗೆ ₹ 2.5 ಲಕ್ಷ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 18 ಮೇ 2025, 12:19 IST
Last Updated 18 ಮೇ 2025, 12:19 IST
ಉಪ್ಪಿನಂಗಡಿ ಸಹಕಾರ ಸಂಘದ ವತಿಯಿಂದ ದೇಶದ ರಕ್ಷಣಾ ನಿಧಿಗೆ ₹ 2.5 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು
ಉಪ್ಪಿನಂಗಡಿ ಸಹಕಾರ ಸಂಘದ ವತಿಯಿಂದ ದೇಶದ ರಕ್ಷಣಾ ನಿಧಿಗೆ ₹ 2.5 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು   

ಉಪ್ಪಿನಂಗಡಿ: ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ ನಡೆಸಿದ ಭಾರತೀಯ ಕ್ಷಣಾ ಪಡೆಗೆ ಬೆಂಬಲ ಸೂಚಿಸಿ ಉಪ್ಪಿನಂಗಡಿ ಸಹಕಾರ ವ್ಯವಸಾಯಿಕ ಸಂಘದ ವತಿಯಿಂದ ದೇಶದ ರಕ್ಷಣಾ ನಿಧಿಗೆ ₹2.5 ಲಕ್ಷ ದೇಣಿಗೆಯನ್ನು ಹಸ್ತಾಂತರಿಸಲಾಯಿತು.

ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ದಡ್ಡು ಅವರು ಬಿಎಸ್ಎಫ್‌ನ ನಿವೃತ್ತ ಉಪ ಕಮಾಂಡೆಂಟ್ ಚಂದಪ್ಪ ಮೂಲ್ಯ ಅವರಿಗೆ ಚೆಕ್ ಹಸ್ತಾಂತರಿಸಿದರು.

ದೇಶದ ಹಿತಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಸಂಕಲ್ಪ ನಮ್ಮದಾಗಿರಬೇಕು. ಉಪ್ಪಿನಂಗಡಿ ಸಹಕಾರ ಸಂಘದ ಸಿಬ್ಬಂದಿ ಒಂದು ದಿನದ ವೇತನವನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದರೆ, ನಿರ್ದೇಶಕರು ಮೀಟಿಂಗ್ ಭತ್ಯೆಯನ್ನು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎಂದರು.

ADVERTISEMENT

ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ಸದಸ್ಯರಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ರಾಘವ ನಾಯ್ಕ, ಸಂಘದ ಮಾಜಿ ಅಧ್ಯಕ್ಷ ಯಶವಂತ ಜಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾ ಕೆ., ಸಿಬ್ಬಂದಿ ಪುಷ್ಪರಾಜ ಶೆಟ್ಟಿ, ಪ್ರವೀಣ್ ಆಳ್ವ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.