ADVERTISEMENT

‘ಗುತ್ತು ಮನೆತನದಲ್ಲಿ ಕೌಟುಂಬಿಕ ಏಕತೆ’

​ಪ್ರಜಾವಾಣಿ ವಾರ್ತೆ
Published 12 ಮೇ 2025, 5:34 IST
Last Updated 12 ಮೇ 2025, 5:34 IST
ಕಾಸರಗೋಡು ಪಾರೆಕಟ್ಟೆಯ ಚೆಂಗಳ ಗುತ್ತು ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು
ಕಾಸರಗೋಡು ಪಾರೆಕಟ್ಟೆಯ ಚೆಂಗಳ ಗುತ್ತು ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು   

ಕಾಸರಗೋಡು: ‘ತುಳುನಾಡಿನ ಗುತ್ತು ಬಾಳಿಕೆಗಳು ಶಿಷ್ಟಾಚಾರವನ್ನು ಮೀರದೆ ಪರಂಪರಾಗತವಾದ ವಿಚಾರಗಳನ್ನು ಗೌರವಿಸುತ್ತಿರುವುದು ಉತ್ತಮ ಲಕ್ಷಣ. ಇದು ಕೌಟುಂಬಿಕ ಏಕತೆಯನ್ನು ಬಲಪಡಿಸಿದೆ' ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಪಾರೆಕಟ್ಟೆಯ ಚೆಂಗಳ ಗುತ್ತು ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರ ದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು ‘ಚೆಂಗಳ ಗುತ್ತು ಕುಟುಂಬದ ಸದಸ್ಯರು  ಒಟ್ಟುಗೂಡಿ ನಿರ್ಮಿಸಿದ ತರವಾಡು ಮನೆ ಮತ್ತು ದೈವಾಲಯಗಳು ಶ್ರದ್ಧಾಭಕ್ತಿಯ ಪ್ರತೀಕ' ಎಂದರು.

ಉಮೇಶ್ ಶೆಟ್ಟಿ ಮನ್ನಿಪ್ಪಾಡಿ ಸಂಪಾದಿಸಿದ ‘ಜೀಟಿಗೆ’ ಸ್ಮರಣ ಸಂಚಿಕೆಯನ್ನು ಸ್ವಾಮೀಜಿ ಬಿಡುಗಡೆಗೊಳಿಸಿದರು. ತಂತ್ರಿಗಳಾದ ಉಳಿಯುತ್ತಾಯ ವಿಷ್ಣು ಆಸ್ರಣ್ಣರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ADVERTISEMENT

ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಜಾನಪದ ವಿದ್ವಾಂಸ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ದೈವರಾಧನೆ ಕೇವಲ ನಂಬಿಕೆಯಲ್ಲ, ಆತ್ಮಾಭಿಮಾನದ ಪ್ರತೀಕ ಎಂದರು.

ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೆ.ಜಿ ಶಾನುಭೋಗ್, ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಐ.ಸುಬ್ಬಯ್ಯ ರೈ, ಮಧೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ ಕೆ, ಪ್ರಾಧ್ಯಾಪಕ ಅಶ್ವಿನ್ ಶೆಟ್ಟಿ, ಬ್ರಹ್ಮಕಳಶೋತ್ಸವ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಬಲ್ಲಾಳ್ ಚೆಂಗಳ ದೊಡ್ಡಬೀಡು ಪಾಲ್ಗೊಂಡಿದ್ದರು. ವಿಷ್ಣುಮೂರ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ರಮೇಶ ಶೆಟ್ಟಿ ತುಮಿನಾಡು ಅಧ್ಯಕ್ಷತೆ ವಹಿಸಿದ್ದರು. ಕೆ.ಶ್ರೀಶರಾಜ್ ಶೆಟ್ಟಿ ಸ್ವಾಗತಿಸಿದರು. ಶ್ರೀಕಾಂತ್ ಶೆಟ್ಟಿ ವಂದಿಸಿದರು. ಉಮೇಶ್ ಶೆಟ್ಟಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.