ADVERTISEMENT

ತುಳು ಕತೆಗಳ ಇಂಗ್ಲಿಷ್ ಅನುವಾದ ಸಂಪುಟ: ‘ಹಾರ್ಟ್‌ಬೀಟ್ಸ್’ ಬಿಡುಗಡೆ

ತುಳು ಕತೆಗಳ ಇಂಗ್ಲಿಷ್ ಅನುವಾದ ಸಂಪುಟ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 19:30 IST
Last Updated 8 ಮಾರ್ಚ್ 2021, 19:30 IST
ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹಾಗೂ ಇತಿಹಾಸ ಪ್ರಾಧ್ಯಾಪಕರಾಗಿದ್ದ ಪ್ರೊ. ಬಿ.ಸುರೇಂದ್ರ ರಾವ್ ಅವರು ತುಳುವಿನಿಂದ ಇಂಗ್ಲಿಷ್‌ಗೆ ಅನುವಾದಿಸಿದ ‘ಹರ್ಟ್‌ಬೀಟ್ಸ್–ತುಳು ಸ್ಟೋರೀಸ್’ (ತುಳು ಕತೆಗಳ ಅನುವಾದ ಸಂಪುಟ)
ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹಾಗೂ ಇತಿಹಾಸ ಪ್ರಾಧ್ಯಾಪಕರಾಗಿದ್ದ ಪ್ರೊ. ಬಿ.ಸುರೇಂದ್ರ ರಾವ್ ಅವರು ತುಳುವಿನಿಂದ ಇಂಗ್ಲಿಷ್‌ಗೆ ಅನುವಾದಿಸಿದ ‘ಹರ್ಟ್‌ಬೀಟ್ಸ್–ತುಳು ಸ್ಟೋರೀಸ್’ (ತುಳು ಕತೆಗಳ ಅನುವಾದ ಸಂಪುಟ)   

ಮಂಗಳೂರು: ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಹಾಗೂ ಇತಿಹಾಸ ಪ್ರಾಧ್ಯಾಪಕರಾಗಿದ್ದ ಪ್ರೊ. ಬಿ.ಸುರೇಂದ್ರ ರಾವ್ ಅವರು ತುಳುವಿನಿಂದ ಇಂಗ್ಲಿಷ್‌ಗೆ ಅನುವಾದಿಸಿದ ‘ಹಾರ್ಟ್‌ಬೀಟ್ಸ್–ತುಳು ಸ್ಟೋರೀಸ್’ (ತುಳು ಕತೆಗಳ ಅನುವಾದ ಸಂಪುಟ)ವು ಮಾ.10ರಂದು ಬೆಳಿಗ್ಗೆ 10ಕ್ಕೆ ಬಿಡುಗಡೆಗೊಳ್ಳಲಿದೆ.

ಮಂಗಳೂರು ವಿಶ್ವವಿದ್ಯಾಲಯದ ಎಸ್‌.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಭಾಂಗಣದಲ್ಲಿ ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಕೃತಿ ಬಿಡುಗಡೆ ಮಾಡುವರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು. ರೋಶನಿ ನಿಲಯದ ವಿಶ್ರಾಂತ ಕುಲಸಚಿವ ಡಾ. ಲಕ್ಷ್ಮೀನಾರಾಯಣ ಭಟ್ ಪಿ., ಕುಲಸಚಿವ ರಾಜುಮೊಗವೀರ, ಪ್ರಸಾರಾಂಗ ನಿರ್ದೇಶಕ ಪ್ರೊ.ಕೆ.ಅಭಯಕುಮಾರ್ ಪಾಲ್ಗೊಳ್ಳುವರು.

ADVERTISEMENT

ಈ ಕೃತಿಯಲ್ಲಿ ತುಳು ಸಂಸ್ಕೃತಿಗೆ ಸಂಬಂಧಿಸಿದ ಜನಪ್ರಿಯ ಹಾಗೂ ಮೌಲಿಕ ಕತೆಗಳು ಇಂಗ್ಲಿಷ್‌ಗೆ ಅನುವಾದಗೊಂಡಿದ್ದು, ತುಳು ಭಾಷೆಯಲ್ಲಿ ಮಹತ್ತರ ಘಟ್ಟವಾಗಿದೆ. ಅನುವಾದಕ ಪ್ರೊ.ಬಿ. ಸುರೇಂದ್ರರಾವ್ ಈಚೆಗೆ ನಿಧನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.