ADVERTISEMENT

ಕೋಸ್ಟ್‌ ಗಾರ್ಡ್‌ ಅಕಾಡೆಮಿಗೆ158 ಎಕರೆ ಭೂಮಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:48 IST
Last Updated 19 ಸೆಪ್ಟೆಂಬರ್ 2020, 16:48 IST

ಮಂಗಳೂರು: ದೇಶದ ಮೊದಲ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಗಳೂರಿನಲ್ಲಿ ಸ್ಥಾಪನೆಗೊಳ್ಳಲಿದ್ದು, ಇದಕ್ಕಾಗಿ ಕೆಐಎಡಿ
ಬಿಯಿಂದ ಮಂಜೂರಾಗಿದ್ದ 158 ಎಕರೆ ಭೂಮಿಯನ್ನು ಕರಾವಳಿ ಕಾವಲು ಪಡೆಗೆ ಹಸ್ತಾಂತರ ಮಾಡಲಾಗಿದೆ.

ತಾಲೂಕಿನ ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಸ್ಥಾಪಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಜನವರಿ ಯಲ್ಲಿಯೇ 160 ಎಕರೆ ಜಮೀನು ಮಂಜೂರು ಮಾಡಿದ್ದರು. ಕೆಐಎಡಿಬಿ ಭೂ ಬ್ಯಾಂಕ್‌ನಿಂದ ಹಂಚಿಕೆ ಮಾಡಲಾಗಿದೆ.

ಈ ಅಕಾಡೆಮಿಯನ್ನು ಮೊದಲು ಕೇರಳದ ಕಣ್ಣೂರಿನಲ್ಲಿ ಸ್ಥಾಪಿಸಲು ಯೋಜಿಸಲಾಗಿತ್ತು. ಪರಿಸರ ಕಾರಣಗಳಿಂದಾಗಿ ಯೋಜನೆ ರದ್ದುಗೊಳಿಸಿತ್ತು.

ADVERTISEMENT

ಈ ಬಗ್ಗೆ ಸಂಸದ ನಳಿನ್‌ಕುಮಾರ್ ಕಟೀಲ್‌ ಟ್ವೀಟ್‌ ಮಾಡಿ, ‘ಮಂಗಳೂರಿನಲ್ಲಿ ಕರಾವಳಿ ಕಾವಲು ಪಡೆಯ ಅಕಾಡೆಮಿ ಸ್ಥಾಪಿಸಲು 158 ಎಕರೆ ಭೂಮಿಯನ್ನು ಕೆಐಎಡಿಬಿಯಿಂದ ಪಡೆಯಲಾ ಗಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ತರಬೇತಿಯಲ್ಲಿ ಇದು ಮೈಲಿಗಲ್ಲು ಆಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.