ADVERTISEMENT

ಕೊಂಬಾರು: ಮಣಿಬಾಂಡ ಕಟ್ಟೆ ರಸ್ತೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 25 ಮೇ 2025, 13:55 IST
Last Updated 25 ಮೇ 2025, 13:55 IST
ಕಡಬ ತಾಲ್ಲೂಕು ಕೊಂಬಾರು ಗ್ರಾಮದ ಭಿರ್ಮೆರೆಗುಂಡಿ ಸೇತುವೆ ಮತ್ತು ಮಣಿಬಾಂಡ ರಸ್ತೆಯನ್ನು ಶಾಸಕಿ ಭಾಗೀರತಿ ಮುರುಳ್ಯ ಉದ್ಘಾಟಿದರು
ಕಡಬ ತಾಲ್ಲೂಕು ಕೊಂಬಾರು ಗ್ರಾಮದ ಭಿರ್ಮೆರೆಗುಂಡಿ ಸೇತುವೆ ಮತ್ತು ಮಣಿಬಾಂಡ ರಸ್ತೆಯನ್ನು ಶಾಸಕಿ ಭಾಗೀರತಿ ಮುರುಳ್ಯ ಉದ್ಘಾಟಿದರು   

ಉಪ್ಪಿನಂಗಡಿ: ಕೊಂಬಾರು ಗ್ರಾಮದ ಮಣಿಬಾಂಡದಿಂದ ಕಟ್ಟೆಯವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಕೊಂಬಾರು ಭಿರ್ಮೆರೆಗುಂಡಿ ಸೇತುವೆಯನ್ನು ಸುಳ್ಯ ಶಾಸಕಿ ಭಾಗೀರತಿ ಮುರುಳ್ಯ ಗುರುವಾರ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಶಿವಪ್ರಸಾದ್ ನಡ್ತೋಟ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬಿಳಿನೆಲೆ ಸಹಕಾರ ಸಂಘದ ಅಧ್ಯಕ್ಷ ವಾಡ್ಯಪ್ಪ ಗೌಡ, ಉಪಾಧ್ಯಕ್ಷ ವೆಂಕಟರಮಣ, ಕೊಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಧುಸೂದನ್ ಭಾಗವಹಿಸಿದ್ದರು.

ಹೈಕೋರ್ಟ್‌ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ ಅವರು ಶುಕ್ರವಾರ ಮೆಟ್ಟತ್ತಾರು ಸೇತುವೆಯನ್ನು ಉದ್ಘಾಟಿಸಿದ್ದು, ಭಿರ್ಮೆರೆಗುಂಡಿ ಸೇತುವೆ ಬಳಿ ‘ಫಲಾನುಭವಿ ಸನ್ಮಿತ್ರ ಬಳಗ ಕೊಂಬಾರು’ ವತಿಯಿಂದ ಸೇತುವೆ ಮತ್ತು ರಸ್ತೆ ಕಾಮಗಾರಿಯ ಕಾರ್ಯ ಸಾಧನೆಗಾಗಿ ಅಳವಡಿಸಲಾಗಿದ್ದ ಅಭಿನಂದನಾ ಫಲಕವನ್ನು ಅನಾವರಣ ಮಾಡಿದ್ದರು. ಪತ್ರಿಕೆಯಲ್ಲಿ 2 ಕಾಮಗಾರಿಯನ್ನು ನ್ಯಾಯಮೂರ್ತಿ ಉದ್ಘಾಟಿಸಿದ್ದರು ಎಂದು
ವರದಿಯಾಗಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.