ADVERTISEMENT

ಇಂಡಿಯಾನಾ ಆಸ್ಪತ್ರೆಯಲ್ಲಿ ‘ಹೆಲ್ದಿ ಹಾರ್ಟ್ ಕ್ಲಬ್‌’

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2022, 2:56 IST
Last Updated 30 ಸೆಪ್ಟೆಂಬರ್ 2022, 2:56 IST

ಮಂಗಳೂರು: ನಗರದ ಪಂಪ್‍ವೆಲ್ ಬಳಿ ಇರುವ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್‌ನಲ್ಲಿ ಹೆಲ್ದಿ ಹಾರ್ಟ್ ಕ್ಲಬ್‍ಗೆ ಗುರುವಾರ ಚಾಲನೆ ನೀಡಲಾಯಿತು.

ಆಸ್ಪತೆಯ ಆಡಳಿತ ನಿರ್ದೇಶಕ, ಮುಖ್ಯ ಹೃದ್ರೋಗ ತಜ್ಞ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ‘ಜಗತ್ತಿನಲ್ಲಿ ಹೃದ್ರೋಗದಿಂದ ಅತಿ ಹೆಚ್ಚು ಸಾವು ಸಂಭವಿಸುತ್ತಿದೆ. ಇದಕ್ಕೆ ಆಧುನಿಕ ಜೀವನ ಶೈಲಿ, ಆಹಾರ, ವಿಹಾರ ಕಾರಣವಾಗುತ್ತಿದೆ’ ಎಂದರು.

ಪ್ರತಿನಿತ್ಯ ವಾಯು ವಿಹಾರ, ವ್ಯಾಯಾಮ, ಫಾಸ್ಟ್ ಫುಡ್‍ಗಳ ಬದಲಾಗಿ ಮನೆಯ ಆಹಾರವನ್ನೇ ಸೇವಿಸಬೇಕು. ನಿತ್ಯ ತರಕಾರಿ, ಹಣ್ಣು ಹಂಪಲು, ಮೊಟ್ಟೆ, ಮೀನು ಸೇವನೆ ಜತೆಗೆ, ವಾರಕ್ಕೊಮ್ಮೆ ಮಾಂಸ ಸೇವನೆ ಮಾಡಬಹುದು. ಮಕ್ಕಳನ್ನು ಸೈಕ್ಲಿಂಗ್, ಕ್ರೀಡೆಗಳಲ್ಲಿ ತೊಡಗಿಸಬೇಕು. ಆ ಮೂಲಕ ಆರೋಗ್ಯವಂತ ಭಾರತ ನಿರ್ಮಾಣ ಮಾಡುವುದು ಅಗತ್ಯವಾಗಿದೆ ಎಂದರು.

ADVERTISEMENT

40 ವರ್ಷ ಮೇಲ್ಪಟ್ಟವರು ನಿರಂತರ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ತಪಾಸಣೆ ಮಾಡಿಕೊಳ್ಳಬೇಕು. ಇಂಡಿಯಾನಾ ಆಸ್ಪತ್ರೆಯ ಹೆಲ್ದಿ ಹಾರ್ಟ್ ಕ್ಲಬ್ ಸೇರಿಕೊಂಡು ಹಲವು ಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು. ಶಸ್ತ್ರಚಿಕಿತ್ಸೆಗಳಲ್ಲಿ ರಿಯಾಯಿತಿ ಕೂಡಾ ಇದೆ ಎಂದು ಕುಂಬ್ಳೆ ಹೇಳಿದರು. ಆಸ್ಪತ್ರೆಯ ಅಧ್ಯಕ್ಷ, ಮಕ್ಕಳ ತಜ್ಞ ಡಾ.ಅಲಿ ಕುಂಬ್ಳೆ, ಸಿಇಒ ವಿಜಯಚಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.