ADVERTISEMENT

ಬಂಟ್ವಾಳ: ಫಾರೂಕ್ ಗೂಡಿನಬಳಿ ನಿಧನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 16:10 IST
Last Updated 1 ಅಕ್ಟೋಬರ್ 2021, 16:10 IST
ಫಾರೂಕ್‌
ಫಾರೂಕ್‌   

ಬಂಟ್ವಾಳ: ಪತ್ರಕರ್ತ, ಯುವ ಸಾಹಿತಿ ಫಾರೂಕ್ ಗೂಡಿನಬಳಿ (44) ದೀರ್ಘಕಾಲದ ಅನಾರೋಗ್ಯ
ದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.

ವಿವಿಧ ಪತ್ರಿಕೆಗಳಿಗೆ ವರದಿಗಾರನಾಗಿ, ಪಂಚಾಯಿತಿ ರಾಜ್ ವ್ಯವಸ್ಥೆಯಡಿ ಹಕ್ಕು ಮತ್ತು ಕರ್ತವ್ಯ, ಮಕ್ಕಳ ಹಕ್ಕಿನ ತರಬೇತುದಾರರಾಗಿ, ವಿವಿಧ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ಮೃತರಿಗೆ ತಾಯಿ, ಪತ್ನಿ, ಪುತ್ರಿ ಇದ್ದಾರೆ.

ADVERTISEMENT

ಮಾಜಿ ಸಚಿವ ಬಿ.ರಮಾನಾಥ ರೈ, ಪತ್ರಕರ್ತರ ಸಂಘದ ಪದಾಧಿಕಾರಿಗಳು ಅಂತಿಮ ನಮನ‌ ಸಲ್ಲಿಸಿದರು. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಗೂಡಿನಬಳಿ ಮಸೀದಿ ಬಳಿ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.