ಮಂಗಳೂರು: ಕದ್ರಿ ಮಂಜುನಾಥ ದೇವಸ್ಥಾನದ ಆಡಳಿತ ಮಂಡಳಿಗೆ ನೇಮಕಗೊಂಡ ಸದಸ್ಯರನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ನಗರ ಪಾಲಿಕೆ ಕಚೇರಿಯಲ್ಲಿ ಸನ್ಮಾನಿಸಿ ಶುಭ ಹಾರೈಸಿದರು.
ದೇವಸ್ಥಾನದ ಟ್ರಸ್ಟಿಗಳಾದ ಕಿರಣ್ ಜೆ, ಪ್ರೀತಾ ನಂದನ್, ಉಷಾ ಪ್ರಭಾಕರ್, ರಾಜೇಂದ್ರ, ನಾರಾಯಣ್ ಕೋಟ್ಯಾನ್, ದಿಲ್‌ರಾಜ್ ಆಳ್ವ ಅವರನ್ನು ಶಾಸಕರು ಸನ್ಮಾನಿಸಿದರು. ಎಸ್‌ಡಿಎಂ ಕಾಲೇಜು ನಿವೃತ್ತ ಪ್ರಾಂಶುಪಾಲ ದೇವರಾಜ್ ಕೆ. ಶುಭ ಹಾರೈಸಿದರು.
ಮಾಜಿ ಕಾರ್ಪೋರೇಟ್ ಡಿ.ಕೆ. ಅಶೋಕ್ ಕುಮಾರ್, ಜೆ. ನಾಗೇಂದ್ರ ಕುಮಾರ್, ಅಮೃತ್ ವಿ. ಕದ್ರಿ, ಭಾಸ್ಕರ್ ರಾವ್, ಪದ್ಮನಾಭ ಅಮೀನ್, ಗಿರೀಶ್ ಆಳ್ವ, ವಿಕಾಸ್ ಶೆಟ್ಟಿ, ಬಾಜಿಲ್ ಕುಲಶೇಖರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.