ADVERTISEMENT

ರವಿಶಂಕರ್ ವಳಕುಂಜಗೆ ಕದ್ರಿ ವಿಷ್ಣು ಪ್ರಶಸ್ತಿ ಪ್ರದಾನ

ಕದ್ರಿ ಯಕ್ಷ ಬಳಗ ವಾರ್ಷಿಕವಾಗಿ ನೀಡುವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 6:31 IST
Last Updated 19 ನವೆಂಬರ್ 2025, 6:31 IST
ಯಕ್ಷಗಾನ ಕಲಾವಿದ ರವಿಶಂಕರ್ ವಳಕುಂಜ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು
ಯಕ್ಷಗಾನ ಕಲಾವಿದ ರವಿಶಂಕರ್ ವಳಕುಂಜ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ-2025’ ನೀಡಿ ಗೌರವಿಸಲಾಯಿತು   

ಮಂಗಳೂರು: ಕಟೀಲು ಯಕ್ಷಗಾನ ಮೇಳದ ತಿರುಗಾಟದಲ್ಲಿ 19 ವರ್ಷ ಒಂದೇ ಒಂದು ರಜೆ ಪಡೆಯದೆ ದಾಖಲೆ ಮಾಡಿರುವ ತೆಂಕುತಿಟ್ಟಿನ ‘ರಾಜ ಹಾಸ್ಯಗಾರ’ ರವಿಶಂಕರ್ ವಳಕುಂಜ ಅವರಿಗೆ ‘ಕದ್ರಿ ವಿಷ್ಣು ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಒಂಬತ್ತು ವರ್ಷಗಳಿಂದ ಕದ್ರಿ ದೇವಸ್ಥಾನದ ಅಂಗಣದಲ್ಲಿ ಕಟೀಲು ಮೇಳದ ಸೇವೆ ಬಯಲಾಟ ನಡೆಸಿಕೊಂಡು ಬರುತ್ತಿರುವ ಕದ್ರಿ ಯಕ್ಷ ಬಳಗ ನೀಡುವ ಕದ್ರಿ ವಿಷ್ಣು ಪ್ರಶಸ್ತಿಯನ್ನು ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮಿನಾರಾಯಣ ಆಸ್ರಣ್ಣ ಪ್ರದಾನ ಮಾಡಿದರು.

ಕದ್ರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಡಾ. ಜಯಶಂಕರ್ ಮಾರ್ಲ, ಲೀಲಾಕ್ಷ ಬಿ. ಕರ್ಕೇರ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸಿ.ಎಸ್. ಭಂಡಾರಿ, ರವೀಂದ್ರನಾಥ್ ಶೆಟ್ಟಿ, ರವೀಂದ್ರ ಶೇಟ್, ಸುಣ್ಣಂಬಳ ವಿಶ್ವೇಶ್ವರ ಭಟ್, ಜಯಶೀಲ ಅಡ್ಯಂತಾಯ, ಮೂಲ್ಕಿ ಕರುಣಾಕರ ಶೆಟ್ಟಿ, ದಿವಾಕರ ಶೆಟ್ಟಿ ಪರಾರಿ ಗುತ್ತು ಮುಖ್ಯ ಅತಿಥಿಗಳಾಗಿದ್ದರು.

ADVERTISEMENT

ಯಕ್ಷ ಬಳಗದ ಅಧ್ಯಕ್ಷ ಕದ್ರಿ ನವನೀತ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕದ್ರಿ ಯಕ್ಷ ಬಳಗದ ಗೌರವ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ, ತಾರಾನಾಥ ಶೆಟ್ಟಿ ಬೋಳಾರ, ಶಿವ ಪ್ರಸಾದ್ ಪ್ರಭು, ಎಲ್ಲೂರು ರಾಮಚಂದ್ರ ಭಟ್, ಸುಧಾಕರ್ ಶೆಟ್ಟಿ ದೋಣಿಂಜೆ ಗುತ್ತು, ಕೃಷ್ಣ ಶೆಟ್ಟಿ ತಾರೆಮಾರ್, ಹರೀಶ್ ಕುಮಾರ್, ನಿವೇದಿತಾ ಎನ್ ಶೆಟ್ಟಿ, ಬೆಟ್ಟಂಪಾಡಿ ಸುಂದರ ಶೆಟ್ಟಿ, ಮಧುಸೂದನ ಅಲೆವೂರಾಯ ಇದ್ದರು.

ಪ್ರಧಾನ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯಾಧ್ಯಕ್ಷ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು. ಸುಧಾಕರ ರಾವ್ ಪೇಜಾವರ ವಂದಿಸಿದರು. ಕಟೀಲು ಮೇಳದ ಕಲಾವಿದರಿಂದ ‘ದಶಾವತಾರ’ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.