ADVERTISEMENT

ಕೆ–ಸಿಎಎಸ್‌ ಪರಿಣಾಮ ಮುಷ್ಕರ: ಆಳ್ವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 15:32 IST
Last Updated 12 ಡಿಸೆಂಬರ್ 2020, 15:32 IST

ಮಂಗಳೂರು: ‘ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರವು 2019ರ ಮಾರ್ಚ್‌ನಲ್ಲಿ ಜಾರಿಗೆ ತಂದ ‘ಕರ್ನಾಟಕ ಸಮಗ್ರ ಪ್ರದೇಶ ಯೋಜನೆ (ಕೆ–ಸಿಎಎಸ್‌)’ಯೇ ಸಾರಿಗೆ ನೌಕರರ ಮುಷ್ಕರ ಹಾಗೂ ಸಾಮಾನ್ಯ ಪ್ರಯಾಣಿಕರ ಪರದಾಟಕ್ಕೆ ಕಾರಣ’ ಎಂದು ಮಂಗಳೂರು ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ ರಾಜ್ ಆಳ್ವ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ಟ್ಯಾಗ್ ಮಾಡಿರುವ ಅವರು, ‘ರಾಜ್ಯದ ಬಸ್‌ ಮಾರ್ಗಗಳನ್ನು ಸರ್ಕಾರದ ನಿಗಮಕ್ಕೆ ಸೀಮಿತಗೊಳಿಸಿ, ಖಾಸಗಿ ಬಸ್‌ಗಳಿಗೆ ಪರವಾನಗಿ ನಿರ್ಬಂಧಿಸುವ ಈ ಕಾಯ್ದೆಯಿಂದ ರಾಜ್ಯದಲ್ಲಿ ಸಾರಿಗೆ ಸುಧಾರಣೆಗೆ ಹಿನ್ನಡೆಯಾಗಿದೆ. ಇದು ಜನ ಸಾಮಾನ್ಯರೂ ಉತ್ತಮ ಸೌಲಭ್ಯಗಳಿಂದ ವಂಚಿತರಾಗುವಂತೆ ಮಾಡಿದೆ. ಇದರ ಪರಿಣಾಮವೇ ಮುಷ್ಕರಕ್ಕೂ ಅವಕಾಶವಾಗಿದೆ. ಕೂಡಲೇ ಕೆ–ಸಿಎಎಸ್ ಹಿಂಪಡೆಯಿರಿ. ತೆರಿಗೆಯಲ್ಲೂ ಏಕ ವ್ಯವಸ್ಥೆಯನ್ನು ಜಾರಿಗೊಳಿಸಿ’ ಎಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT