ವಿಟ್ಲ: ಇಲ್ಲಿನ ಸೂರಿಕುಮೇರು ಜಂಕ್ಷನ್ ಸಮೀಪದ ಬಾಳ್ತಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಯರಡ್ಕ ಎಂಬಲ್ಲಿ ಕೋಳಿ ಅಂಗಡಿ ಉಮ್ಮರ್ ಎಂಬುವರ ಮನೆ ಸಮೀಪದ ಗುಡ್ಡ ಇರುವುದರಿಂದ ಕುಟುಂಬದ ನಿವಾಸಿಗಳು ಭಯಗೊಂಡಿದ್ದಾರೆ.
ಈ ಗುಡ್ಡವು ಅಪಾಯಕಾರಿಯಾಗಿದ್ದು, ಅನಾಹುತ ಸಂಭವಿಸುವ ಮುನ್ನ ಬಾಳ್ತಿಲ ಗ್ರಾಮ ಪಂಚಾಯಿತಿ, ಬಂಟ್ವಾಳ ತಹಶೀಲ್ದಾರ್, ಶಾಸಕರು, ಸಂಸದರು ಕ್ರಮ ಕೈಗೊಳ್ಳಬೇಕು. ಇದೇ ಪರಿಸರದ ಮೂರು ಮನೆಗಳಿಗೂ ಇದರರಿಂದ ಅಪಾಯವಿದೆ. ಜಿಲ್ಲಾಧಿಕಾರಿ ಭೇಟಿ ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.