ADVERTISEMENT

ಇಂಗ್ಲಿಷ್‌ ಮಾಧ್ಯಮದಲ್ಲೂ ಕನ್ನಡದ ಕಂಪು ಹರಡಲಿ

ಉಳ್ಳಾಲ ತಾಲ್ಲೂಕು ಕಸಾಪ ವತಿಯಿಂದ ಮನೆಯಂಗಳದಲ್ಲಿ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 7:10 IST
Last Updated 2 ನವೆಂಬರ್ 2022, 7:10 IST
ಕೊಣಾಜೆ ಕೆಳಗಿನಮನೆ ಅಚ್ಯುತ ಗಟ್ಟಿ ಅವರ ಮನೆಯಂಗಳದಲ್ಲಿ ಉಳ್ಳಾಲ ತಾಲ್ಲೂಕು ಕಸಾಪ ಘಟಕದ ವತಿಯಿಂದ ‘ಮನೆಯಂಗಳದಲ್ಲಿ ರಾಜ್ಯೋತ್ಸವ’ ಆಚರಿಸಲಯಿತು.
ಕೊಣಾಜೆ ಕೆಳಗಿನಮನೆ ಅಚ್ಯುತ ಗಟ್ಟಿ ಅವರ ಮನೆಯಂಗಳದಲ್ಲಿ ಉಳ್ಳಾಲ ತಾಲ್ಲೂಕು ಕಸಾಪ ಘಟಕದ ವತಿಯಿಂದ ‘ಮನೆಯಂಗಳದಲ್ಲಿ ರಾಜ್ಯೋತ್ಸವ’ ಆಚರಿಸಲಯಿತು.   

ಮುಡಿಪು: ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲೂ ಕನ್ನಡ ಸಂಸ್ಕೃತಿಯ ಕಾರ್ಯಕ್ರಮಗಳು ನಿರಂತರ ನಡೆಯಲಿ ಎಂದು ಮುಖಂಡ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ಘಟಕದ ವತಿಯಿಂದ ಕೊಣಾಜೆ ಕೆಳಗಿನಮನೆ ಅಚ್ಯುತಗಟ್ಟಿಯವರ ಮನೆಯಂಗಳದಲ್ಲಿ ಮಂಗಳವಾರ ಹಮ್ಮಿಕೊಂಡ ರಾಜ್ಯೋತ್ಸವದಲ್ಲಿ 67 ಹಣತೆಗಳನ್ನು ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.

‘ಕರ್ನಾಟಕದಲ್ಲಿ ಜಾತಿ– ಧರ್ಮಗಳ ರಾಜಕಾರಣ ದೂರವಾಗಿ ಕನ್ನಡ ಭಾಷಾಭಿಮಾನದ ರಾಜಕಾರಣ ಬೆಳೆಯಬೇಕಿದೆ.ಸಾಹಿತ್ಯ ಪರಿಷತ್ತಿಗೆ ಕನ್ನಡವೇ ಪಕ್ಷ, ಕನ್ನಡವೇ ಧರ್ಮ’ ಎಂದು ಘಟಕದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಹೇಳಿದರು.

ADVERTISEMENT

ಕೊಲ್ಯ ಭಗವತಿ ವಿದ್ಯಾಕೇಂದ್ರದ ಅಧ್ಯಕ್ಷ ಸದಾಶಿವ ಉಳ್ಳಾಲ, ಕೋಟೆಕಾರ್ ಚಂದ್ರಿಕಾ ರೈ, ಸುರೇಖಾ ಚಂದ್ರಹಾಸ ಇದ್ದರು.

ಅಚ್ಯುತ ಗಟ್ಟಿ ಅವರನ್ನು ಸನ್ಮಾನಿಸಲಾಯಿತು.

ಘಟಕದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರು ಸ್ವಾಗತಿಸಿದರು. ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ವಂದಿಸಿದರು. ಕಾರ್ಯದರ್ಶಿ ಎಡ್ವರ್ಡ್ ಲೋಬೊ, ಶಿಕ್ಷಕ ರವಿಶಂಕರ್, ಶ್ರೀವಾಣಿ ಕಾಕುಂಜೆ ಕನ್ನಡ ಹಾಡುಗಳನ್ನು ಹಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಲಾಯಿತು. ಕಸಾಪ ಉಳ್ಳಾಲ ಘಟಕದ ವತಿಯಿಂದ 20 ಕಡೆಗಳಲ್ಲಿ ರಾಜ್ಯೋತ್ಸವ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.